ಹುಬ್ಬಳ್ಳಿ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಇಂದಿನ ವೇಗದ ಜೀವನಶೈಲಿಯಲ್ಲಿ ಪೌಷ್ಟಿಕ ಆಹಾರ ಸೇವನೆಯು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಾಲಕ್ ಸೊಪ್ಪಿನಿಂದ ತಯಾರಿಸಬಹುದಾದ ಚಿತ್ರಾನ್ನ ಅತ್ಯುತ್ತಮ ಆಯ್ಕೆಯಾಗಿದೆ. ಇದು ಕೇವಲ ರುಚಿಕರವಾಗಿಯೇ ಅಲ್ಲ, ಆರೋಗ್ಯಕರವೂ ಹೌದು.
ಒಂದು ಕಟ್ಟು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳಗಿ ಸಣ್ಣಗೆ ಕತ್ತರಿಸಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಬೇಳೆ, ಶೇಂಗಾ ಬೀಜ ಹುರಿದು, ಹಸಿಮೆಣಸು, ಇಂಗು ಹಾಗೂ ಕರಿಬೇವಿನ ಸೊಪ್ಪು ಹಾಕಿ ಸುಟ್ಟರೆ, ಪಾಲಕ್ ಸೊಪ್ಪು ಮತ್ತು ಶುಂಠಿ ಸೇರಿಸಿ ಬೇಯಿಸಬೇಕು. ತೆಂಗಿನ ತುರಿ, ಅರಿಶಿನ ಪುಡಿ ಹಾಗೂ ಉಪ್ಪು ಹಾಕಿ ಹುರಿದ ಬಳಿಕ, ಈ ಮಿಶ್ರಣವನ್ನು ಸಿದ್ದ ಅನ್ನದಲ್ಲಿ ಸೇರಿಸಿ, ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರ ಚಿತ್ರಾನ್ನ ಸಿದ್ಧ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa