ಓರಿಯೆಂಟೇಷನ್ ಭೂ ಮತ್ತು ಜಲ ಸಾಹಸ ಕ್ರೀಡಾ ಶಿಬಿರ
ಬೆಂಗಳೂರು, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಉಚಿತ ಜಲ ಹಾಗೂ ಭೂ ಸಾಹಸ ಕ್ರೀಡೆಗಳ ಓರಿಯೆಂಟೇಷನ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದ್ದು. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್‍ 15 ರಿಂದ 19 ರವರೆಗೆ ಚಿತ್ರದುರ್ಗ ಜಿಲ್ಲೆಯ ಹಿ
ಓರಿಯೆಂಟೇಷನ್ ಭೂ ಮತ್ತು ಜಲ ಸಾಹಸ ಕ್ರೀಡಾ ಶಿಬಿರ


ಬೆಂಗಳೂರು, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಉಚಿತ ಜಲ ಹಾಗೂ ಭೂ ಸಾಹಸ ಕ್ರೀಡೆಗಳ ಓರಿಯೆಂಟೇಷನ್ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದ್ದು. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಏಪ್ರಿಲ್‍ 15 ರಿಂದ 19 ರವರೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ವಾಣಿವಿಲಾಸ ಸಾಗರದಲ್ಲಿ ಜಲ ಸಾಹಸ ಕ್ರೀಡಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಅರ್ಜಿಗಳನ್ನು ಏಪ್ರಿಲ್‍ 11 ರೊಳಗೆ ಸಲ್ಲಿಸಬೇಕು.

ಏಪ್ರಿಲ್‍ 16 ರಿಂದ 20ರವರೆಗೆ ರಾಮನಗರದಲ್ಲಿ ಭೂ ಸಾಹಸ ಕ್ರೀಡಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಅರ್ಜಿಗಳನ್ನು ಏಪ್ರಿಲ್ 15 ರೊಳಗೆ ಸಲ್ಲಿಸಬೇಕು.

ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು 15 ರಿಂದ 30 ವರ್ಷದೊಳಗಿರಬೇಕು. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಗೇಟ್ ನಂ.12, ಕೊಠಡಿ ಸಂಖ್ಯೆ: 17-18, ಬೆಂಗಳೂರು- 560001 ಇಲ್ಲಿ ಖುದ್ದಾಗಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22239771, 7204266766 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande