ಬಳ್ಳಾರಿ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕಲೆಯಿಂದ ಜೀವನ ಕಂಡುಕೊಂಡ ಬೆಳಗಲ್ಲು ವೀರಣ್ಣನವರು ತೊಗಲುಗೊಂಬೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗೊಳಿಸಿ ಇಡೀ ತಮ್ಮ ಜೀವನವನ್ನೇ ತೊಗಲುಗೊಂಬೆ ಕಲೆಗಾಗಿ ಮುಡುಪಿಟ್ಟ ನಾಡೋಜ ಬೆಳಗಲ್ಲು ವೀರಣ್ಣನವರ ಹೆಸರನ್ನು ಅಜರಾಮರವಾಗಿರಿಸಲು ಅವರ ಹೆಸರನ್ನು ನಗರದ ಒಂದು ರಸ್ತೆಗೆ ಅಥವಾ ಫಸ್ಟ್ ಗೇಟ್ ಹತ್ತಿರದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಲ್ಗೆ ಇಡಬೇಕಾಗಿದೆ ಎಂದು ನಗರದ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಲೇಖಕಿಯರ ಸಂಘದ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಖ್ಯಾತ ಆಯುರ್ವೇದ ವೈದ್ಯರಾದ ವಸುಂಧರ ಭೂಪತಿ ಮನವಿ ಮಾಡಿದ್ದಾರೆ.
ನಗರದ ದೊಡ್ಡನಗೌಡ ರಂಗಮಂದಿರದಲ್ಲಿ ನಾಡೋಜ ಬೆಳಗಲ್ಲು ವೀರಣ್ಣನವರ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಅವರು ವೀರಣ್ಣನವರ ಹೆಸರಿನಲ್ಲಿ ಇಂದು ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಸಂತಸದ ಸಂಗತಿ ಈ ಪ್ರಶಸ್ತಿಯನ್ನು ಪಡೆದಿರುವುದು ಸಹ ನಾಡೋಜ ವಿಟಿ ಕಾಳೆಯವರು ಕಾಕತಾಳಿ ಎಂಬಂತೆ ಇಬ್ಬರು ನಾಡೋಜಗಳ ಸಂಗಮದಂತಿದೆ ಈ ಪ್ರಶಸ್ತಿಯು ಬೆಳಗಲ್ಲು ವೀರಣ್ಣನವರ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಅತ್ಯಂತ ಸಂತಸದ ಕ್ಷಣವಾಗಿದೆ ಎಂದರು.
ಬೆಳಗಲ್ಲು ವೀರಣ್ಣನವರ ಮಗ ಹಾಗೂ ಶ್ರೀ ರಾಮಾಂಜನೇಯ ತೊಗಲಗೊಂಬೆ ಕಲಾ ಟ್ರಸ್ಟ್ ನ ಅಧ್ಯಕ್ಷರಾದ ಬೆಳಗಲ್ಲು ಹನುಮಂತ ಪ್ರಸ್ತಾವಿಕ ಮಾತನಾಡಿ, ನಶಿಸಿಕೊಂಡು ಹೋಗುತ್ತಿರುವ ತೊಗಲುಗೊಂಬೆ ಕಲೆಯನ್ನು ನಮ್ಮ ಕುಟುಂಬ ಇಲ್ಲಿಯವರೆಗೆ ಪೆÇೀಷಿಸಿಕೊಂಡು ಬಂದಿದೆ ಈ ಕಲೆಯನ್ನು ಈಗ ಜಿಲ್ಲೆಯ ಮತ್ತು ರಾಜ್ಯದ ಹಲವು ಕುಟುಂಬಗಳು ತಮ್ಮ ಜೀವನ ನಿರ್ವಹಣೆಗೆ ಬಳಸಿಕೊಳ್ಳುತ್ತಿವೆ ಇದು ಯಾವುದೂ ದೊಡ್ಡ ಮಾತಲ್ಲ ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದೇ ಅತ್ಯಂತ ದೊಡ್ಡ ವಿಷಯ ಎಂದು ಬೆಳಗಲ್ಲು ಹನುಮಂತು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ನಮ್ಮ ತಂದೆಯವರ ಹೆಸರಿನಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣ ವಿಶ್ವವಿದ್ಯಾಲಯದಲ್ಲಿ ಠೇವಣಿಯನ್ನು ಇಟ್ಟು ಪ್ರತಿವರ್ಷ ಒಬ್ಬ ಸಾಧಕ ವಿದ್ಯಾರ್ಥಿಗೆ ನಮ್ಮ ತಂದೆ ಹೆಸರಿನಲ್ಲಿ ಪೆÇ್ರೀತ್ಸಾಹ ಧನವನ್ನು ವಿತರಿಸಿ ಗೌರವಿಸಲಾಗುವುದು ಈ ಮೂಲಕ ನಮ್ಮ ತಂದೆ ಬೆಳಗಲ್ಲಿ ವೀರಣ್ಣನವರ ಹೆಸರನ್ನು ಅಜರಾಮರವನ್ನಾಗಿ ಉಳಿಸಲು ಒಂದು ಸಣ್ಣ ಪ್ರಯತ್ನ ಮಾಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಜಯದೇವಿ ಜಂಗಮಶೆಟ್ಟಿ, ನಿಷ್ಟಿ ರುದ್ರಪ್ಪ, ಚೂರನೂರು ಕೊಟ್ರಪ್ಪ, ಯಲ್ಲನಗೌಡ ಶಂಕರ ಬಂಡಿ ಮುದ್ದಟನೂರು ತಿಪ್ಪೇಸ್ವಾಮಿ, ಬಿ ಹೆಚ್ ಎಮ್ ವಿರೂಪಾಕ್ಷಯ್ಯ ಮೈಸೂರಿನ ಚಲನ ಚಿತ್ರ ಕಲಾವಿದರು ಸೇರಿದಂತೆ ಅನೇಕ ಜನರು ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ವೀಣಾ ನಿರೂಪಿಸಿದರು. ವೀರಣ್ಣನವರ ಮೊಮ್ಮಗ ಗಗನ್ ಸ್ವಾಗತಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್