ಕೋಲಾರ, ೨೮ ಏಪ್ರಿಲ್ (ಹಿ.ಸ) :
ಆ್ಯಂಕರ್ : ವಿಧ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಶಾಸಕ ಕೊತ್ತೂರು ಮಂಜುನಾಥ್ ಅವರ ಸ್ವಂತ ಹಣದಲ್ಲಿ ಸೋಮವಾರ ಎಂಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಶಾಸಕರ ಗೃಹ ಕಛೇರಿಯಲ್ಲಿ ಲ್ಯಾಪ್‌ಟಾಪ್, ಕಾಲೇಜು ಶುಲ್ಕ ಸೇರಿದಂತೆ ಓದಲು ಆರ್ಥಿಕ ಸಹಾಯ ಮಾಡಿದರು.
ಶಾಸಕರ ಅನುಯಾಯಿಗಳು ಶಾಸಕರ ವೇತನವನ್ನು ಬರೀ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾತ್ರವೇ ನೀಡಲಾಗುತ್ತಾ ಇದೆ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಓದಿಗೆ ಅನುಕೂಲವಾಗುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನ ಕೊಡಬೇಕು ಎಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೈ ಶಿವಕುಮಾರ್, ಮೈಲಾಂಡಹಳ್ಳಿ ಮುರಳಿ, ಜಮ್ಮನಹಳ್ಳಿ ಕೃಷ್ಣಪ್ಪ, ರಾಜೇಂದ್ರ ಗೌಡ, ಚಿಟ್ಟಿ, ಅರವಿಂದ್, ನದೀಂ, ಚಿನ್ನಾಪುರ ನಾರಾಯಣಸ್ವಾಮಿ, ಶಾಸಕರ ಅಪ್ತ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುಂತಾದವರು ಇದ್ದರು.
ಚಿತ್ರ : ಶಾಸಕ ಕೊತ್ತೂರು ಮಂಜುನಾಥ್ ವಿದ್ಯಾರ್ಥಿಗಳಿಗೆ ನೀಡಿರುವ ಲ್ಯಾಪ್‌ಟಾಪ್‌ಗಳನ್ನು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ವೈ. ಶಿವಕುಮಾರ್ ಹಾಗೂ ಇತರರು ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್