ಜೆಎನ್‌ಯು ಚುನಾವಣೆ : ಎಬಿವಿಪಿ ಭರ್ಜರಿ ಸಾಧನೆ
ನವದೆಹಲಿ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭರ್ಜರಿ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದೆ. ಎಬಿವಿಪಿಯ ಅಭ್ಯರ್ಥಿ ವೈಭವ್ ಮೀನಾ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಗೆದ್ದು, ಜೆಎನ್‌ಯುವಲ್ಲಿ
Jnu election


ನವದೆಹಲಿ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭರ್ಜರಿ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದೆ.

ಎಬಿವಿಪಿಯ ಅಭ್ಯರ್ಥಿ ವೈಭವ್ ಮೀನಾ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಗೆದ್ದು, ಜೆಎನ್‌ಯುವಲ್ಲಿ ದೀರ್ಘಕಾಲದ ಎಡಪಂಥೀಯ ಪ್ರಭಾವಕ್ಕೆ ತಡೆಯೊಡ್ಡಿದ್ದಾರೆ.

ಈ ಚುನಾವಣೆಯಲ್ಲಿ ಎಬಿವಿಪಿ 46 ಕೌನ್ಸಿಲರ್ ಹುದ್ದೆಗಳಲ್ಲಿ 24 ಸ್ಥಾನಗಳನ್ನು ಗೆದ್ದಿದ್ದು, ಮಹತ್ವದ ಸಾಧನೆಗಳನ್ನೂ ದಾಖಲಿಸಿದೆ. ಮುಖ್ಯವಾಗಿ, ಸಮಾಜ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಶಾಲೆಯಂತಹ ಎಡಪಂಥೀಯ ಪ್ರಬಲ ಕ್ಷೇತ್ರಗಳಲ್ಲಿಯೂ ಎಬಿವಿಪಿ ಎರಡು ಸ್ಥಾನಗಳನ್ನು ಗೆದ್ದಿದ್ದು ಗಮನಾರ್ಹವಾಗಿದೆ. ಎಂಜಿನಿಯರಿಂಗ್ , ಸಂಸ್ಕೃತ ಮತ್ತು ಭಾರತೀಯ ಅಧ್ಯಯನ , ನ್ಯಾನೋಸೈನ್ಸ್ ಕೇಂದ್ರ ಮುಂತಾದ ಕಡೆಗಳಲ್ಲಿ ಶೇ. 100ರಷ್ಟು ಗೆಲುವು ಸಾಧಿಸಲಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ 5 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಸೋಲಂಕಿ, ಜೆಎನ್‌ಯುನಲ್ಲಿ ರಾಷ್ಟ್ರೀಯತೆಯ ಹೊಸ ಯುಗ ಆರಂಭವಾಗಿದೆ ಎಂದು ಹೇಳಿದ್ದಾರೆ.

ವೈಭವ್ ಮೀನಾ ಅವರು, ವಿದ್ಯಾರ್ಥಿಗಳ ಕಲ್ಯಾಣಕ್ಕೆ ಪ್ರತಿಯೊಂದು ಕ್ರಮವನ್ನು ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.

ಜೆಎನ್‌ಯುನಲ್ಲಿ ಎಬಿವಿಪಿಯ ಈ ಗೆಲುವು ಕೇವಲ ಒಂದು ಚುನಾವಣಾ ಫಲಿತಾಂಶವಲ್ಲ ಬದಲಿಗೆ, ಕಾಲೇಜು ಆವರಣದ ರಾಜಕೀಯ ವಾತಾವರಣದಲ್ಲಿನ ದಿಕ್ಕುಬದಲಾವಣೆಯ ಚಿಹ್ನೆಯಾಗಿ ಪರಿಣಮಿಸಿದೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande