ಬಳ್ಳಾರಿ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಮ್ಮು ಕಾಶ್ಮೀರದ ಪಹಲ್ಗಾಮಾಗೆ ಪ್ರವಾಸಕ್ಕೆ ತೆರಳಿದ್ದ ಭಾರತೀಯರ ಮೇಲೆ ಅಮಾನುಷ ದಾಳಿ ಮಾಡಿ ಹತ್ಯೆಗೈದ ಉಗ್ರವಾದಿಗಳಿಗೆ ಕಂಡಲ್ಲಿ ಗುಂಡು ಹೊಡೆದು ಶಿಕ್ಷೆ ನೀಡಬೇಕೆಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದ್ದಾರೆ.
ಪಹಲ್ಗಾಮಾ ಉಗ್ರರ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ, ಉಗ್ರವಾದ ವಿರೋಧಿಸಿ - ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ವತಿಯಿಂದ ಮಹಾತ್ಮ ಗಾಂಧಿಯವರ ಪುತ್ಥಳಿಯಿಂದ ಗಡಿಗಿ ಚೆನ್ನಪ್ಪ ವೃತ್ತದವರೆಗೆ ಏರ್ಪಡಿಸಿದ್ದ ಆತ್ಮಜ್ಯೋತಿ ಮೆರಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರವಾಸಕ್ಕೆ ತೆರಳಿದ್ದವರು ಕುಟುಂಬಸ್ಥರು, ಯುವಕರು, ನವ ವಿವಾಹಿತರು, ಅವರನ್ನು ಹತ್ಯೆಗೈದ ಉಗ್ರರ ಕೃತ್ಯ ಅತ್ಯಂತ ಅಮಾನವೀಯ ಎಂದರು.
ಇದಕ್ಕೆ ಉಗ್ರರ ಈ ದಾಳಿಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯಗಳೇ ಕಾರಣ, ಆಗಿರುವ ತಪ್ಪುಗಳನ್ನು ಸರ್ಕಾರ ಒಪ್ಪಿಕೊಳ್ಳಲಿ, ಮುಂದೆ ತಪ್ಪಾಗದಂತೆ ಕ್ರಮ ವಹಿಸಲಿ, ಕಾಂಗ್ರೆಸ್ ಪಕ್ಷ ಭಾರತ ಸರ್ಕಾರದ ಜೊತೆಗಿದೆ, ಕೇಂದ್ರ ಸರ್ಕಾರಕ್ಕೆ ಎಲ್ಲ ಸಹಕಾರ ಕೊಡುವುದಾಗಿ ನಮ್ಮ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಮೇಯರ್ ಮುಲ್ಲಂಗಿ ನಂದೀಶ್, ಹುಮಾಯೂನ್ ಖಾನ್, ಎ.ಮಾನಯ್ಯ, ಕಲ್ಲುಕಂಭ ಪಂಪಾಪತಿ, ಎರುಕುಲಸ್ವಾಮಿ, ಮಂಜುಳಾ, ಶಮೀಮ್ ಜಕ್ಲಿ, ಚಂಪಾ ಚವ್ಹಾಣ್, ಎಂ.ರಾಜೇಶ್ವರಿ, ನೂರ್ ಮೊಹಮ್ಮದ್, ವಿವೇಕ್ ಪೇರಂ, ಮಿಂಚು ಸೀನಾ, ವಿ.ಕುಬೇರ, ಎಂ.ಪ್ರಭಂಜನಕುಮಾರ್, ಗಾದೆಪ್ಪ, ರಾಜಶೇಖರ್, ಆಸಿಫ್, ನಾಜು, ಜಬ್ಬಾರ್, ರಾಮಾಂಜನೇಯ, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಸರಗೂ ನಾಗು, ವಿಷ್ಣು ಬೋಯಪಾಟಿ, ನಾಗಭೂಷಣಗೌಡ, ಅಲ್ಲಾಭಕಷ, ಹುಸೇನ್ ಪೀರಾಂ, ಅಭಿಲಾಷ್, ಶಿವರಾಜ್, ಗುಡ್ಲೂರು ರವಿ, ಪಿ.ಜಗನ್, ಶಿವರಾಜ್, ಡಿ.ಸೂರಿ, ಚಾನಾಳ್ ಶೇಖರ್, ಯರಗುಡಿ ಸೋಮಣ್ಣ, ಕಣೇಕಲ್ ಮೆಹಬೂಬಸಾಬ, ರಾಕಿ, ಶಿವು, ಸಮೀರ್, ರಜಾಕ್, ಸಿದ್ಧೇಶ್, ಶಂಕರ್, ವೆಂಕಟ ನಾಯ್ಡು, ಲೋಕೇಶ್, ಭತ್ರಿ ವಾಸು, ಶಾಂತಮ್ಮ, ಯಶೋಧಾ, ವಿಜಯಲಕ್ಷ್ಮೀ, ಅಸುಂಡಿ ನಾಗರಾಜ ಸೇರಿದಂತೆ ಹಲವರು ಭಾಗಿಯಾಗಿದ್ದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್