ರಂಭಾಪುರಿ ಶ್ರೀ ಸಮಾಜದಲ್ಲಿ ಕೀರ್ತಿ, ಯಶಸ್ಸು, ಶ್ರೇಯಸ್ಸು ಹೊಂದುತ್ತಾರೆ : ವೀರಸೋಮೇಶ್ವರ ಜಗದ್ಗುರುಗಳು
ಗದಗ, 25 ಏಪ್ರಿಲ್ (ಹಿ.ಸ.) : ಆ್ಯಂಕರ್ : ನ್ಯಾಯ, ನೀತಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾ ಕ್ರಿಯಾಶೀಲತೆ ಮತ್ತು ಕಾಯಕನಿಷ್ಠೆ ಹೊಂದಿರುವ ವ್ಯಕ್ತಿಗಳು ಸಮಾಜದಲ್ಲಿ ಕೀರ್ತಿ, ಯಶಸ್ಸು, ಶ್ರೇಯಸ್ಸು ಹೊಂದುತ್ತಾರೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ಗದಗ ಜಿ
ಪೋಟೋ


ಗದಗ, 25 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನ್ಯಾಯ, ನೀತಿ, ಧರ್ಮ ಮಾರ್ಗದಲ್ಲಿ ನಡೆಯುತ್ತಾ ಕ್ರಿಯಾಶೀಲತೆ ಮತ್ತು ಕಾಯಕನಿಷ್ಠೆ ಹೊಂದಿರುವ ವ್ಯಕ್ತಿಗಳು ಸಮಾಜದಲ್ಲಿ ಕೀರ್ತಿ, ಯಶಸ್ಸು, ಶ್ರೇಯಸ್ಸು ಹೊಂದುತ್ತಾರೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಬಾಳಿಹಳ್ಳಿಮಠ ಕಲ್ಯಾಣ ಮಂಟಪದಲ್ಲಿ ನಡೆದ ರೇವಣಸಿದ್ದಯ್ಯನವರ ಸಹಸ್ರಚಂದ್ರ ದರ್ಶನ ಹಾಗೂ ಶ್ರೀಮತಿ ದ್ರಾಕ್ಷಾಯಣಿ ಶ್ರೀ ರೇವಣಸಿದ್ದಯ್ಯ ಬಾಳಿಹಳ್ಳಿಮಠ ವೇದಿಕೆ(ಸಭಾ ಮಂಟಪ)ದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ. ಆಶೀರ್ವಚನ ನೀಡುತ್ತಿದ್ದರು.

ಲಿಂ. ವೀರಗಂಗಾಧರ ಜಗದ್ಗುರುಗಳು ನಡೆದಾಡಿದ ಲಕ್ಷೇಶ್ವರದ ಪುಣ್ಯಭೂಮಿಯಲ್ಲಿ ದೇವರು, ಧರ್ಮ, ಸಂಸ್ಕಾರ, ಮಾನವೀಯ ಮೌಲ್ಯ, ಗುರು-ಹಿರಿಯರ ಬಗ್ಗೆ ಗೌರವ, ಪ್ರೀತಿ ನೆಲೆಯೂರಿದೆ. ಇಂದು ಸಂಪತ್ತು ಗಳಿಸುವ ಭರದಲ್ಲಿ ಇದಾವುದನ್ನೂ ಮರೆಯದಿರಿ. ಎಲ್ಲರೊಂದಿಗೆ ಪ್ರೀತಿ-ಭಾಂಧವ್ಯ, ಸ್ನೇಹ-ಸೌಹಾರ್ಧತೆಯ ಜೀವನದ ಜತೆಗೆ ಆರೋಗ್ಯ ಸಂಪತ್ತು ಹೊಂದುವುದು ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಗಳ ಔಚಿತ್ಯ ಅರಿಯದೇ ನಿರಾಸಕ್ತಿ ತೋರುತ್ತಿರುವುದು ವಿಷಾದದ ಸಂಗತಿ.

ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಿ.ಪ ಸದಸ್ಯ ಎಸ್.ವಿ. ಸಂಕನೂರ ಮತ್ತು ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಮನುಷ್ಯ ಸಮಾಜಮುಖಿಯಾಗಿ ಮತ್ತು ಸಮಾಜದಿಂದ ಲೇಸೆನಿಸಿಕೊಂಡು ಬದುಕಿದಾಗ ಮಾತ್ರ ಬದುಕು ಸಾರ್ಥಕ, ಅಂತಹ ಬದುಕು ಬಾಳಿದ ಹಿರಿಯರು ನಮಗೆಲ್ಲ ಆದರ್ಶ ಎಂದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಮಾತನಾಡಿದರು. ಲಕ್ಷೇಶ್ವರ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು, ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಬಂಕಾಪುರ ಆರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು,

ರೇವಣಸಿದ್ದಯ್ಯನವರು ಸದಾ ಚಟುವಟಿಕೆ ಕ್ರಿಯಾಶೀಲತೆಯಿಂದ ಒಕ್ಕಲುತನದ ಜತೆಗೆ ವ್ಯಾಪಾರ ಮತ್ತು ರಾಜಕೀಯದ ಅನುಭವ ಹೊಂದಿ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಸರಳ, ಸುಂದರ, ಆರ್ಥಿಕ ಶಿಸ್ತಿನ ಬದುಕು ಪ್ರೇರಣೆಯಾಗಿದ್ದು, ಸಹಸ್ರಚಂದ್ರ ದರ್ಶನದ ಸಂಭ್ರಮಾಚರಣೆಯಲ್ಲಿರುವ ಪರಮಾತ್ಮನು ದೀರ್ಘಾಯುಷ್ಯ, ದಂಪತಿಗಳಿಗೆ ಆಯುರಾರೋಗ್ಯ, ದಯಪಾಲಿಸಲಿ ಎಂದು ರಂಭಾಪುರಿ ಶ್ರೀಗಳು ಆಶೀರ್ವದಿಸಿದರು.

ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ. ಅಬ್ಬಿಗೇರಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು, ರೇವಣಸಿದ್ದಯ್ಯ ಬಾಳಿಹಳ್ಳಿಮಠ ದಂಪತಿಗಳು. ಬಾಳಿಹಳ್ಳಿಮಠ ಕುಟುಂಬದ ಡಾ. ರೇಣುಕ ಪ್ರಸಾದ, ಸಿದ್ಧರಾಮಸ್ವಾಮಿ, ವಿಜಯರುದ್ರಯ್ಯ, ವಿನಯಶಂಕರ ದಂಪತಿಗಳು ಸೇರಿ ಹಿರಿಯರು, ವಾಣಿಜ್ಯೋದ್ಯಮಿಗಳು, ಬಂಧು-ಬಳಗದವರು ಪಾಲ್ಗೊಂಡಿದ್ದರು. ಚಂದ್ರಣ್ಣ ಬಾಳಿಹಳ್ಳಿಮಠ, ಗುರುಪಾದಯ್ಯ ಹಿರೇಮಠ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande