ಕೊಪ್ಪಳ, 25 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನಗರದ ಕೇಂದ್ರ ಬಸ್ ನಿಲ್ದಾಣದ ಕನಕ ವೃತ್ತದ ಮೂಲಕ ಅಶೋಕ ವೃತ್ತದವರೆಗೆ ಮೆರವಣಿಗೆ ನಡೆಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಮೂಲಕ ಶೋಕಾಚರಣೆ ಮಾಡಿದರು.
ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪುರ ನೇತೃತ್ವದಲ್ಲಿ ಮೆರವಣಿಗೆ ಮೂಲಕ ದೇಶದ ಐಕ್ಯತೆ ಭ್ರಾತೃತ್ವ ಮತ್ತು ಭಯೋತ್ಪಾದನೆ ನಿರ್ಮೂಲನೆಗೆ ಒತ್ತಾಯಿಸಿ ಘೋಷಣೆ ಕೂಗಿದರು ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ, ಕೇಂದ್ರದಲ್ಲಿ ಇರುವ ಪಕ್ಷ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು .
ಪಕ್ಷ ಯಾವುದೇ ಇದ್ದರೂ ಅದಕ್ಕೆ ಇಂತಹ ದೇಶದ ಭದ್ರತೆ ವಿಚಾರವಾಗಿ ಸಹಕಾರ ನೀಡಲಾಗುತ್ತದೆ. ಧರ್ಮವನ್ನು ಎಳೆದು ತರುವ ಅಥವಾ ರಾಜಕೀಯ ಬೆರೆಸುವ ಕೆಲಸ ಮಾಡಬಾರದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರಾದ ಮುತ್ತುರಾಜ್ ಕುಷ್ಟಗಿ, ಗುರುರಾಜ್ ಹಲಗೇರಿ, ಅಜಿಮ್ ಅತ್ತಾರ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಕಾಂಗ್ರೆಸ್ ಮುಖಂಡರಾದ ಅಜ್ಜಪ್ಪ ಸ್ವಾಮಿ, ಜ್ಯೋತಿ ಎಂ. ಗೊಂಡಬಾಳ, ಕಿಶೋರಿ ಬೂದನೂರ, ಪದ್ಮಾ ಕಂಬಳಿ, ಸವಿತಾ ಗೋರಂಟ್ಲಿ, ರೇಷ್ಮಾ ಖಾಜಾವಲಿ, ಗಾಳೆಪ್ಪ ಪೂಜಾರ, ಅಶೋಕ ಗೋರಂಟ್ಲಿ, ಸುರೇಶ ದಾಸರಡ್ಡಿ ಅನೇಕರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್