ಕೋಲಾರ,೨೪ ಏಪ್ರಿಲ್ (ಹಿ.ಸ)
ಆಂಕರ್:
ಮುಂಬರುವ ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಗೆ ಸ್ಪರ್ದಿಸಲು ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅಕ್ರಮವಾಗಿ ಬಂಗಾರಪೇಟೆ ತಾಲ್ಲೂಕಿನ ನತ್ತಿಬೆಲೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಡಿಲಿಗೇಟ್ ಪಡೆದಿದ್ದಾರೆ ಆದರೆ ನಾರಾಯಣಸ್ವಾಮಿ ಹಾಲು ಸರಬರಾಜು ಮಾಡಿಲ್ಲ ಅಧಿಕಾರಿಗಳ ಮೇಲೆ ಒತ್ತಡ ತಂದು ಸದಸ್ಯತ್ವ ಪಡೆದಿದ್ದಾರೆ ಇದು ನಾರಾಯಣಸ್ವಾಮಿ ಅವರ ಅಧಿಕಾರ ದುರುಪಯೋಗದ ಸ್ಪಷ್ಟ ನಿದರ್ಶನವಾಗಿದೆ ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ ಆರೋಪಿಸಿದ್ದಾರೆ.
ಕೋಲಾರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹಾಲು ಉತ್ಪಾದಕರ ಸಂಘದ ಸದಸ್ಯರಾದವರು ನಿಯಮಿತವಾಗಿ ಹಾಲು ಸರಬರಾಜು ಮಾಡಬೇಕು ಅವರ ಖಾತೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಾಲಿನ ಬಿಲ್ ಪಾವತಿಯಾಗುತ್ತದೆ. ಜೊತೆಗೆ ಸರ್ಕಾರದಿಂದ ೫ ರೂ ಪ್ರತೀ ಲೀ ಹಾಲಿಗೆ ಹಾಲು ಪೂರೈಸಿದ್ದರೆ ಅವರ ಖಾತೆ ಹಣ ಪಾವತಿಯಾಗುತ್ತದೆ. ಆದರೆ ನಾರಾಯಣಸ್ವಾಮಿ ನಿನ್ನೆ ಮೊನ್ನೆ ಸದಸ್ಯರಾಗಿ ಸಹಕಾರ ಸಂಘಕ್ಕೆ ನುಸುಳಿದ್ದಾರೆ.
ಅವರು ಹಸುಗಳನ್ನು ಸಾಕಿಲ್ಲ ಸಗಣಿ ಬಾಚಿಲ್ಲ ಹಾಲು ಕರೆದಿಲ್ಲ ಆದರೂ ಅಧಿಕಾರಿಗಳ ಮೇಲೆ ಒತ್ತಡ ತಂದು ಅಧಿಕಾರ ದುರಪಯೋಗ ಪಡಿಸಿಕೊಂಡು ನತ್ತಿಬೆಲೆ ಸಹಕಾರ ಸಂಘದಲ್ಲಿ ಸದಸ್ಯರಾಗಿರುವಂತೆ ದಾಖಲೆಗಳನ್ನು ಸೃಷ್ಟಿಮಾಡಿದ್ದಾರೆ. ಶಾಸಕ ನಾರಾಯಣಸ್ವಾಮಿ ಅವರು ಅಕ್ರಮವಾಗಿ ಪಡೆದಿರುವ ಡಿಲಿಗೇಟ್‌ಅನ್ನು ರದ್ದು ಪಡಿಸಲು ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನನ್ನ ಬಗ್ಗೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವುದಾಗಿ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ ಯಾರು ಒತ್ತುವರಿ ಮಾಡಿದ್ದಾರೆ ಎಂಬುದಕ್ಕೆ ದಾಖಲೆಗಳಿವೆ ದಿ.ಡಿಕೆ ರವಿ ನೀಡಿರುವ ದಾಖಲೆಯೇ ಸಾಕ್ಷಿಯಾಗಿದೆ. ಎಸ್.ಎನ್ ಸಿಟಿಯಲ್ಲಿ ಹತ್ತು ಮಂದಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜಮೀನನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದರು.
ನಾನು ಒತ್ತುವರಿ ಮಾಡಿದ್ದಾರೆ ಬೇಲಿ ಹಾಕಿ ಸರ್ಕಾರ ವಶಪಡಿಸಿಕೊಳ್ಳಲಿ ಆದರೆ ನನ್ನ ವಿರುದ್ದ ಆರೋಪ ಮಾಡಿರುವ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಒತ್ತುವರಿ ಮಾಡಿರುವ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಲಿ ಎಂದು ಸವಾಲು ಹಾಕಿದರು.
ನಿವೃತ್ತ ಡಿ.ವೈ.ಎಸ್.ಪಿ. ಶಿವಕುಮಾರ್ ಪಿ. ಮಾತನಾಡಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನತ್ತಿಬೆಲೆ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದಿದ್ದಾರೆ. ಅವರು ಡಿಲಿಗೇಟ್ ಆಗಲು ಅರ್ಹತೆಯೇ ಇಲ್ಲ ಆದರೂ ಅಲ್ಲಿನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಮೇಲೆ ಒತ್ತಡ ತಂದು ಅಕ್ರಮವಾಗಿ ಡಿಲಿಗೇಟ್ ಪಡೆದಿದ್ದಾರೆ. ಕೋಲಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಿರುವ ಎಸ್.ಎನ್ ನಾರಾಯಣಸ್ವಾಮಿ ಅಕ್ರಮವಾಗಿ ಸದಸ್ಯತ್ವ ಪಡೆದಿದ್ದಾರೆ ಒಕ್ಕೂಟದಲ್ಲಿ ಅಕ್ರಮ ನಡೆದಿದೆ ಎಂದು ಹೇಳುವ ನಾರಾಯಣಸ್ವಾಮಿ ನಾಚಿಕೆ ಪಡಬೇಕು ಒಂದು ಲೀಟರ್ ಹಾಲು ಹಾಕಿಲ್ಲ ಎಂದು ಆರೋಪಿಸಿದರು.
ಒಕ್ಕೂಟದಲ್ಲಿ ಅವ್ಯವಹಾರ ನಡೆದಿದೆ. ಅದನ್ನ ತಡೆಯಲು ನಾನು ಒಕ್ಕೂಟದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿರುವ ನಾರಾಯಣಸ್ವಾಮಿ ನಿಯಮಗಳನ್ನು ಉಲ್ಲಂಘಿಸಿ ಸದಸ್ಯತ್ವ ಪಡೆದಿದ್ದಾರೆ ಶಾಸಕರಾದವರು. ಇತರರಿಗೆ ಮಾದರಿಯಾಗಿರಬೇಕು ನತ್ತಿಬೆಲೆ ಹಾಲು ಉತ್ಪಾದಕರ ಸಂಘದಲ್ಲಿ ಯಾರು ರಾಜಿನಾಮೆ ನೀಡಿಲ್ಲ ಚುನಾವಣೆಗೆ ಇನ್ನು ಅವಧಿ ಇದೆ ಆದರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ನಾರಾಯಣಸ್ವಾಮಿ ಪ್ರವೇಶ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಾಲು ಉತ್ಪಾದಕರಾದ ರಾಜಪ್ಪ ಮತ್ತು ನರಸಿಂಹಪ್ಪ ಎಂಬುವರು ಶಾಸಕರ ಅಕ್ರಮ ಸದಸ್ಯತ್ವ ವಿರುದ್ದ ದೂರು ನೀಡಿರುವುದಕ್ಕೆ ಅವರ ವಿರುದ್ದ ಅಧಿಕಾರವನ್ನು ದುರ್ಭಳಕೆ ಮಾಡಿಕೊಂಡು ಪೊಲೀಸರ ಮೇಲೆ ಒತ್ತಡ ಹೇರಿ ಅಮಾಯಕರನ್ನು ಬೆದರಿಸಿ ದೂರನ್ನು ವಾಪಸ್ಸ್ ಪಡೆಯುವಂತೆ ಮಾಡಿದ್ದಾರೆ. ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡರು ಹಾಲು ಒಕ್ಕೂಟದಲ್ಲಿ ಯಾವೂದೇ ಅವ್ಯವಹಾರಗಳು ನಡೆದಿದ್ದರೆ ತನಿಖೆ ಮಾಡಲು ತಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಹನುಮಣ್ಣ, ವೆಂಕಟೇಶ್, ರಮೇಶ್ ಮುಂತಾದವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್