ಹುಬ್ಬಳ್ಳಿ, 22 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವದಾದ್ಯಾಂತ ಭೂ ದಿನವನ್ನು ಆಚರಿಸಲಾಗುತ್ತದೆ. 1970ರಲ್ಲಿ ಆರಂಭಗೊಂಡ ಈ ವಿಶೇಷ ದಿನದ ಉದ್ದೇಶ, ಪರಿಸರ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ತಿಳಿಸುವುದು. ತೋಟಗಳು, ಕಾಡುಗಳು, ನದಿಗಳು ಮತ್ತು ಸಮುದ್ರಗಳು ಮಾನವನ ಬದುಕಿಗೆ ಅಸ್ತಿತ್ವದ ಮೂಲವಾಗಿವೆ. ಆದರೆ ಇಂದು ನಾವು ನೋಡುತ್ತಿರುವ ಪರಿಸ್ಥಿತಿಯಲ್ಲಿ ಪ್ರಕೃತಿಯ ಶೋಷಣೆ, ದೂಷಣ, ಅರಣ್ಯ ನಾಶ ಮತ್ತು ಜಲವಾಯು ಪರಿವರ್ತನೆಗಳು ಗಂಭೀರ ಸಮಸ್ಯೆಗಳಾಗಿ ಮೂಡಿವೆ.
ಭೂ ದಿನವು ಪ್ರತಿಯೊಬ್ಬ ನಾಗರಿಕನಲ್ಲಿಯೂ ಜವಾಬ್ದಾರಿಯ ಅರಿವನ್ನು ಹುಟ್ಟಿಸಬೇಕಾದ ಅವಶ್ಯಕತೆ ಇದೆ. ಪರಿಸರದ ಹಿತಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಮರ ನೆಡುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಮರುಬಳಕೆ ಪ್ರಕ್ರಿಯೆಗೆ ಒತ್ತು ನೀಡುವುದು, ಶುದ್ಧ ಇಂಧನದ ಬಳಕೆ — ಇವೆಲ್ಲವೂ ನಮ್ಮಿಂದ ಆರಂಭವಾಗಬಹುದಾದ ಸರಳ ಕ್ರಮಗಳು.
ಈ ಭೂ ದಿನದ ಸನ್ನಿವೇಶದಲ್ಲಿ, ನಾವೆಲ್ಲರೂ ಪ್ರಕೃತಿಯ ಶ್ರೇಯಸ್ಸಿಗೆ ನಮ್ಮ ಕೊಡುಗೆಯನ್ನು ನೀಡೋಣ. ನಾವಿರುವ ಭೂಮಿಯನ್ನು ಮುಂದಿನ ಪೀಳಿಗೆಗೂ ಸುರಕ್ಷಿತವಾಗಿ ಉಳಿಸೋಣ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa