ನವದೆಹಲಿ, 25 ಮಾರ್ಚ್ (ಹಿ.ಸ.) :
ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಲ್ಲಿ ಇಂದು ಮಿಶ್ರ ವಹಿವಾಟು ಕಂಡುಬಂದಿದೆ. ಅಮೆರಿಕ ಮಾರುಕಟ್ಟೆಗಳು ಬಲವಾದ ಲಾಭದೊಂದಿಗೆ ಮುಕ್ತಾಯವಾದರೆ, ಯುರೋಪಿಯನ್ ಮಾರುಕಟ್ಟೆಗಳು ಮಾರಾಟದ ಒತ್ತಡದಲ್ಲಿದ್ದವು.
ವಾಲ್ ಸ್ಟ್ರೀಟ್‌ನಲ್ಲಿ, ಡೌ ಜೋನ್ಸ್ 600 ಅಂಕಗಳ ಏರಿಕೆ ಕಂಡು 42,557.26 ಅಂಕಗಳಿಗೆ ತಲುಪಿದರೆ, ಎಸ್ ಪಿ 500 ಹಾಗೂ ನಾಸ್ಡಾಕ್ ಸೂಚ್ಯಂಕಗಳು ಕ್ರಮವಾಗಿ 1.76% ಹಾಗೂ 2.27% ಏರಿಕೆ ಕಂಡಿವೆ. ಯುರೋಪಿಯನ್ ಮಾರುಕಟ್ಟೆಗಳಾದ ಎಫ್ ಟಿಎಸ್ಇ, ಸಿಎಸಿ ಮತ್ತು ಡಿಎಎಕ್ಸ ಶೇಕಡಾ 0.10% ರಿಂದ 0.26% ವರೆಗೆ ಕುಸಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ದಾಖಲಾಗಿದೆ. ಹ್ಯಾಂಗ್ ಸೆಂಗ್ ಸೂಚ್ಯಂಕ ಶೇಕಡಾ 2.25% ಕುಸಿದರೆ, ನಿಕ್ಕಿ ಸೂಚ್ಯಂಕ ಶೇಕಡಾ 0.48% ಹಾಗೂ ತೈವಾನ್ ವೆಯ್ಟೆಡ್ ಸೂಚ್ಯಂಕ ಶೇಕಡಾ 0.78% ಏರಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa