ಕಲ್ಲೂರು ಮಹಾಲಕ್ಷ್ಮಿ ದೇಗುಲದಲ್ಲಿ ಚಿನ್ನಾಭರಣ ಕಳವು
ಸಿರವಾರ (ರಾಯಚೂರು), 20 ಮಾರ್ಚ್ (ಹಿ.ಸ.) : ಆ್ಯಂಕರ್ : ಐತಿಹಾಸಿಕ ಪ್ರಸಿದ್ಧ ಸಿರವಾರ ತಾಲೂಕಿನ ಕಲ್ಲೂರಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ (ಮಾ.19) ದುಷ್ಕರ್ಮಿಗಳು ದೇವಸ್ಥಾನಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಬುಧವಾರ ರಾತ್ರಿ
ಕಲ್ಲೂರು ಮಹಾಲಕ್ಷ್ಮಿ ದೇಗುಲದಲ್ಲಿ ದೇವರ ಮೂರ್ತಿ ಮೇಲಿನ ಚಿನ್ನಾಭರಣ ಕಳವು ; ಸಿಸಿಟಿವಿ ವ್ಯವಸ್ಥೆ ಇಲ್ಲ


ಕಲ್ಲೂರು ಮಹಾಲಕ್ಷ್ಮಿ ದೇಗುಲದಲ್ಲಿ ದೇವರ ಮೂರ್ತಿ ಮೇಲಿನ ಚಿನ್ನಾಭರಣ ಕಳವು ; ಸಿಸಿಟಿವಿ ವ್ಯವಸ್ಥೆ ಇಲ್ಲ


ಸಿರವಾರ (ರಾಯಚೂರು), 20 ಮಾರ್ಚ್ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ಪ್ರಸಿದ್ಧ ಸಿರವಾರ ತಾಲೂಕಿನ ಕಲ್ಲೂರಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ (ಮಾ.19) ದುಷ್ಕರ್ಮಿಗಳು ದೇವಸ್ಥಾನಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಬುಧವಾರ ರಾತ್ರಿ ಮಹಾಮಂಗಳಾರತಿಯ ನಂತರ ಮಹಾಲಾಕ್ಷಿö್ಮ ದೇವರ ಮೂರ್ತಿಯ ಮೇಲಿದ್ದ ಅಂದಾಜು 25 ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣವನ್ನು ದುಷ್ಕರ್ಮಿಗಳು ಕಳುವು ಮಾಡಿ, ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, 80 ಗ್ರಾಂ ತೂಕದ ವೆಂಕಟೇಶ್ವರ ಸ್ವಾಮಿ ಕಿರೀಟ, 30 ಗ್ರಾಂ ತೂಕದ ಲಕ್ಷ್ಮಿ ಕಿರೀಟ, 140 ಗ್ರಾಂ ತೂಕದ ಪಾದಗಳು, 40 ಗ್ರಾಂ ತೂಕದ ಪದಕ ಸೇರಿ ಒಟ್ಟು 290 ಗ್ರಾಂ ಚಿನ್ನಾಭರಣ ದೇವರ ಮೂರ್ತಿಗಳ ಮೇಲಿದ್ದು, ಎಲ್ಲವನ್ನೂ ಕಳ್ಳರು ದೋಚಿದ್ದಾರೆ ಎಂದು ತಿಳಿಸಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಯು ಸಿಸಿ ಕ್ಯಾಮೆರಾವನ್ನು ಅಳವಡಿಸಿಲ್ಲ. ಇದನ್ನು ಗಮನಿಸಿರುವ ಕಳ್ಳರು ಆಭರಣಗಳನ್ನು ದೋಚಿ, ಪರಾರಿಯಾಗಿರುವುದು ಎಲ್ಲೂ ದಾಖಲಾಗಿಲ್ಲ ಎಂದು ಹೇಳಲಾಗಿದೆ.

ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande