ಜಿಮ್ಸ್ ಆಸ್ಪತ್ರೆ ; ಒಂದೇ ಗಂಟೆಯಲ್ಲಿ ಇಬ್ಬರ ‌ಸಾವು!
ಕಲಬುರಗಿ, 14 ಮಾರ್ಚ್ (ಹಿ.ಸ.) : ಆ್ಯಂಕರ್ : ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಇಬ್ಬರು ರೋಗಿಗಳು ಸಾವನಪ್ಪಿರುವ ಆರೋಪ ಕೇಳಿ ಬಂದಿದೆ. ಒಂದೇ ಒಂದು ಗಂಟೆ ಅಂತರದಲ್ಲಿ ಇಬ್ಬರು ರೋಗಿಗಳ ಸಾವುನಪ್ಪಿದ್ದು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ್ ನಗರ ತಾಂಡಾ ನಿವಾಸಿ ಶಾರದಬಾಯಿ (65) ಹಾ
ಜಿಮ್ಸ್ ಆಸ್ಪತ್ರೆ


ಕಲಬುರಗಿ, 14 ಮಾರ್ಚ್ (ಹಿ.ಸ.) :

ಆ್ಯಂಕರ್ : ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಇಬ್ಬರು ರೋಗಿಗಳು ಸಾವನಪ್ಪಿರುವ ಆರೋಪ ಕೇಳಿ ಬಂದಿದೆ. ಒಂದೇ ಒಂದು ಗಂಟೆ ಅಂತರದಲ್ಲಿ ಇಬ್ಬರು ರೋಗಿಗಳ ಸಾವುನಪ್ಪಿದ್ದು, ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ್ ನಗರ ತಾಂಡಾ ನಿವಾಸಿ ಶಾರದಬಾಯಿ (65) ಹಾಗೂ ಉದನೂರ್ ತಾಂಡಾದ ನಿವಾಸಿ ದಶರಥ್ ರಾಠೋಡ್ (50) ಮೃತ ರೋಗಿಗಳಾಗಿದ್ದು, ಇಬ್ಬರು ಟಿಬಿ ಕಾಯಿಲೆಯಿಂದ ಬಳಲುತಿದ್ದರು ಎನ್ನಲಾಗಿದೆ.

ಮಂಗಳವಾರ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದ ಶಾರದಾಬಾಯಿ ಸಂಜೆ‌ ಸುಮಾರಿಗೆ ವಾಂತಿ ಭೇದಿಯಿಂದ ಬಳಲುತ್ತಿದ್ದರು. ವೈದ್ಯರು ಬಾರದ ಹಿನ್ನಲೆ ರೋಗಿಗಳು ಸಾವನಪ್ಪಿರುವುದಾಗಿ ರೋಗಿಗಳ ಕಡೆಯವರು ಆರೋಪಿಸಿದ್ದಾರೆ.

ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೆ ಇದೇ ರೀತಿ ಘಟನೆ ನಡೆದರೂ ಸಹ ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆಯ ನಿರ್ಲಕ್ಷತನದಿಂದ ಇದೀಗ ಮತ್ತಿಬರು ಮೃತಪಟ್ಟಿರುವ ಘಟನೆ ನಡೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / ಶ್ರೀಕಾಂತ ಬಿರಾಳ


 rajesh pande