ಕಲಬುರಗಿ, 14 ಮಾರ್ಚ್ (ಹಿ.ಸ.) :
ಆ್ಯಂಕರ್ : ಪಂಚಾಯತಿ ಮನೆ ಮಾಡಿಸಿಕೊಡ್ತೆನೆ ನನ್ನ ಜೊತೆ ಮಲಕೋ ಎಂದ ಪಂಚಾಯತಿ ಸದಸ್ಯ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ ಕಿರುಕುಳ ಆರೋಪಿ ಕೇಳಿ ಬಂದಿದ್ದು, ಗ್ರಾಮ ಪಂಚಾಯತಿ ಸದಸ್ಯ ನೀಲಕಂಠ ರಾಠೋಡ್ ಎಂಬಾತ ಮಳಸಾಪುರ ಗ್ರಾಮದ ಮಹಿಳೆಗೆ ಪೋನ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮಳಸಾಪುರ ಗ್ರಾಮದಿಂದ ಮರಗುತ್ತಿ ಪಂಚಾಯತಿಗೆ ಆಯ್ಕೆಯಾಗಿದ್ದ ನೀಲಕಂಠ, ಪಂಚಾಯತಿಯಿಂದ ಮನೆ ಮಾಡಿಸಿಕೊಡ್ತೆನೆ ಎಂದು ದುಡ್ಡಿಗೆ ಬೇಡಿಕೆ ಇಟ್ಟಿದ್ದಾನೆ. ದುಡ್ಡು ಕೊಡದೆ ಹೊದ್ರೆ ನನ್ನ ಜೊತೆ ಮಲಕೋ ಎಂದು ಒತ್ತಾಯ ಮಾಡಿದ್ದಾನೆ. ನೀನು ಬರಲಿಲ್ಲ ಅಂದ್ರೆ ನಿನ್ನ ಮಗಳನ್ನ ಕಳುಹಿಸು ಎಂದು ಬೇಡಿಕೆ ಇಟ್ಟಿದ್ದಾನೆ. ಪದೇ ಪದೇ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಪಂಚಾಯತಿ ಸದಸ್ಯನ ವಿರುದ್ಧ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದಾರೆ.
ಕಮಲಾಪುರ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ 75, 78,79 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಲಂಬಾಣಿ ಭಾಷೆಯಲ್ಲಿ ಮಾತಾಡಿರೋ ಆಡಿಯೋ ಸಾಕ್ಷಿ ಇದ್ದು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಶ್ರೀಕಾಂತ ಬಿರಾಳ