ಶಿಮ್ಲಾ, 14 ಮಾರ್ಚ್ (ಹಿ.ಸ.) :
ಆ್ಯಂಕರ್ : ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಮತ್ತು ಮಳೆಯ ಪರಿಣಾಮವಾಗಿ ಚಳಿ ಹೆಚ್ಚಾಗಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ತಾಪಮಾನ ಕಡಿಮೆಯಾಗಿದೆ. ಕುಕುಮ್ಸೇರಿಯಲ್ಲಿ -5.8 ಡಿಗ್ರಿ, ಕೀಲಾಂಗ್‌ನಲ್ಲಿ -5.7 ಡಿಗ್ರಿ ಮತ್ತು ಲಹೌಲ್-ಸ್ಪಿಟಿ, ಕಿನ್ನೌರ್ ನಗರಗಳಲ್ಲಿ ತಾಪಮಾನ ಕಡಿಮೆಯಾಗಿದೆ. ಹಗಲು ವೇಳೆಯಲ್ಲಿ, ಬಯಲು ಪ್ರದೇಶಗಳಲ್ಲಿ ಶಾಖ ಹೆಚ್ಚುತ್ತಿದೆ.
ಕಳೆದ 24 ಗಂಟೆಗಳಲ್ಲಿ ಹಿಮಪಾತ ಮತ್ತು ಮಳೆಯ ಪರಿಣಾಮವಾಗಿ ಹಲವೆಡೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಮತ್ತು ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಸಂಭವಿಸಿದೆ.
ಹವಾಮಾನ ಇಲಾಖೆ ಮುಂದಿನ ಎರಡು ದಿನಗಳಲ್ಲಿ (ಮಾರ್ಚ್ 15 ಮತ್ತು 16) ಭಾರೀ ಮಳೆಯ ಹಾಗೂ ಗುಡುಗು-ಮಿಂಚುಗಳ ಎಚ್ಚರಿಕೆಯನ್ನು ನೀಡಿದೆ. 17ರಂದು, ಭಾಗಶಃ ಮೋಡ ಕವಿದ ವಾತಾವರಣ ಮತ್ತು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa