ಮುಂಬಯಿ, 14 ಮಾರ್ಚ್ (ಹಿ.ಸ.) :
ಆ್ಯಂಕರ್ : ಶುಕ್ರವಾರ ಬೆಳಗಿನ ಜಾವ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ಬೋಡ್ವಾಡ್ ಪ್ರದೇಶದಲ್ಲಿ ಟ್ರಕ್ ಒಂದು ರೈಲ್ವೆ ಗೇಟ್ ಮುರಿದು ಆ ಪ್ರದೇಶದಲ್ಲಿ ಹಾದು ಹೋಗುತ್ತಿದ್ದ ಅಮರಾವತಿ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿದೆ.
ಘಟನೆಯ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಘಟನೆಯಿಂದಾಗಿ ಅಮರಾವತಿ ಎಕ್ಸ್‌ಪ್ರೆಸ್ ರೈಲು ಇಂಜಿನ ಹಾಗೂ ರೈಲ್ವೆ ಹಳಿ ಹಾನಿಗೊಳಗಾಗಿದ್ದು, ಮೂರು ರೈಲುಗಳ ಮಾರ್ಗಗಳನ್ನು ಬೇರೆಡೆಗೆ ತಿರುಗಿಸಲಾಗಿದ್ದು, ಎರಡು ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಹಳಿ ದುರಸ್ತಿ ಕಾರ್ಯ ನಡೆದಿದ್ದು, ಅಪಘಾತದಲ್ಲಿ ಹಾನಿಗೊಳಗಾದ ರೈಲ್ವೆ ಎಂಜಿನ್ ಬದಲಿಸಿ ಅಮರಾವತಿ ಎಕ್ಸ್‌ಪ್ರೆಸ್‌ಗೆ ಹೊಸ ಎಂಜಿನ್ ಅಳವಡಿಸಿ ಮುಂದಕ್ಕೆ ಕಳುಹಿಸಲಾಗುವುದು ಎಂದು ರೇಲ್ವೆ ಇಲಾಖೆ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa