ಕೊಪ್ಪಳ, 07 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕೊಪ್ಪಳ ತಾಲೂಕಿನ ಹಲಗೆರಿ ಗ್ರಾಮದ ರಾಮಣ್ಣ ತಂದೆ ದೇವಪ್ಪ ಗುನ್ನಳ್ಳಿ (48) ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದದಾರೆ.
ವ್ಯಕ್ತಿಯು 2024ರ ಜನವರಿ 17 ರಂದು ಬೆಳಿಗ್ಗೆ 5:00 ಗಂಟೆ ಸುಮಾರಿಗೆ ಯಾವದೊ ಕಾರಣಕ್ಕೆ ಮನೆಯಿಂದ ಹೋಗಿ ಮನೆಗೆ ಹಿಂತಿರುಗಿ ವಾಪಸ ಬಾರದೆ ಕಾಣೆಯಾಗಿದ್ದಾನೆ ಎಂದು ವ್ಯಕ್ತಿಯ ಹೆಂಡತಿ ದೂರು ನೀಡಿದ್ದು, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 18/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ದುಂಡು ಮುಖ, ಗೊದಿ ಮೈಬಣ್ಣ, ಕಪ್ಪು ಕುದಲು, ಕುರಚಲು ಗಡ್ಡ, ಸದೃಡ ಮೈಕಟ್ಟು ಹಾಗೂ ಎತ್ತರ 5.5 ಫೂಟ್ ಎತ್ತರವಾಗಿದ್ದು. ಮನೆಯಿಂದ ಹೋಗುವಾಗ ಬಿಳಿಯ ದೋತುರಾ ಮತ್ತು ಬಿಳಿಯ ಲುಂಗಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ.
ಈ ವ್ಯಕ್ತಿಯು ಯಾರಿಗಾದರೂ ಕಂಡಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನA: 08539-100 ಮತ್ತು 230222, ಕೊಪ್ಪಳ ಗ್ರಾಮಿಣ ಪೊಲೀಸ ಠಾಣೆ ಪಿ.ಎಸ್.ಐ ಮೊ.ಸಂ: 08539-221333,9480803746 ಮತ್ತು ಸಿ.ಪಿ.ಐ ದೂರವಾಣಿ ನಂ: 9480803731 ಹಾಗೂ ಕೊಪ್ಪಳ ಡಿ.ವೈ.ಎಸ್.ಪಿ ಪೋ.ನಂ: 08539-230342,9480803720 ಮತ್ತು ಕೊಪ್ಪಳ ಪೊಲೀಸ್ ಠಾಣೆಯ ಎಸ್.ಪಿ ಮೊ.ಸಂ: 08539-230111ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್