ಹುಬ್ಬಳ್ಳಿ : ಮೂವರು ಮನೆಗಳ್ಳರ ಬಂಧನ
ಹುಬ್ಬಳ್ಳಿ, 11 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ಎಪಿಎಂಸಿ ಈಶ್ವರನಗರ ಸಮೃದ್ಧಿ ಬಡಾವಣೆ, ಎಸ್.ಆರ್ ನಗರ ಅಂಕೋಲೆಕರ್ ಲೇಔಟ ಮತ್ತು ಎಂ.ಐ.ಜಿ ಕಾಲನಿಯಲ್ಲಿ ಮನೆ ಕಳ್ಳತನ ಮಾಡಿದ ಮೂವರನ್ನು ಎಪಿಎಂಸಿ ಠಾಣೆ ಪೋಲಿಸರು ಬಂಧಿಸಿದ್ದಾರೆ. ಸಿದ್ದಪ್ಪ ಅಂಬಿಗೇರ ,ವಿಷ್ಣು ಅಂಬಿಗೇರ,ಕುನಾಲಸಿಂಗ್ ಬಂಧಿತರ
Arrest


ಹುಬ್ಬಳ್ಳಿ, 11 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ಎಪಿಎಂಸಿ ಈಶ್ವರನಗರ ಸಮೃದ್ಧಿ ಬಡಾವಣೆ, ಎಸ್.ಆರ್ ನಗರ ಅಂಕೋಲೆಕರ್ ಲೇಔಟ ಮತ್ತು ಎಂ.ಐ.ಜಿ ಕಾಲನಿಯಲ್ಲಿ ಮನೆ ಕಳ್ಳತನ ಮಾಡಿದ ಮೂವರನ್ನು ಎಪಿಎಂಸಿ ಠಾಣೆ ಪೋಲಿಸರು ಬಂಧಿಸಿದ್ದಾರೆ. ಸಿದ್ದಪ್ಪ ಅಂಬಿಗೇರ ,ವಿಷ್ಣು ಅಂಬಿಗೇರ,ಕುನಾಲಸಿಂಗ್ ಬಂಧಿತರು.

2024 ರ ಅಗಸ್ಟ ಹಾಗೂ ಡಿಸೆಂಬರ್ ತಿಂಗಳಲ್ಲಿ ಹುಬ್ಬಳ್ಳಿ ಎಪಿಎಂಸಿ ಈಶ್ವರನಗರ ಸಮೃದ್ಧಿ ಬಡಾವಣೆ, ಎಸ್.ಆರ್ ನಗರ ಅಂಕೋಲೆಕರ್ ಲೇಔಟ ಮತ್ತು ಎಂ.ಐ.ಜಿ ಕಾಲನಿಯಲ್ಲಿ ಮನೆ ಕಳ್ಳತನ ಮಾಡಿದ ಮೂರು ಜನ ಆರೋಪಿತರಿಗೆ ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಓರ್ವ ಬಾಲಕನನ್ನು ಎಪಿಎಂಸಿ ನವನಗರ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದು, ಆರೋಪಿತರ ಬಳಿಯಿಂದ ಮೂರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ನಾಲ್ಕು ಲಕ್ಷ ಐವತ್ತು ಸಾವಿರ ರೂಪಾಯಿ ಮೌಲ್ಯದ ಒಟ್ಟು 60 ಗ್ರಾಂ ತೂಕದ ಬಂಗಾರ, ಹಾಗೂ ೩೭೦೦೦ ರೂಪಾಯಿ ಮೌಲ್ಯದ 360 ಗ್ರಾಂ ತೂಕದ ಬೆಳ್ಳಿ ಆಭರಣ ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಸಮಿವುಲ್ಲಾ ಕೆ. ಪೊಲೀಸ ಇನ್ಸಪೆಕ್ಟರ ನೇತೃತ್ವದಲ್ಲಿ ಪಿ.ಎಸ್.ಐ ದೇವೆಂದ್ರ ಮಾವಿನಿಂಡಿ, ಪಿ.ಎಸ್.ಐ ಎಂ.ಬಿ ಈಟಿ ಹಾಗೂ ಸಿಬ್ಬಂದಿಗಳಾದ ರವಿ.ಆರ್ ಹೊಸಮನಿ, ಬೀರನೂರ, ಸಿ.ವೈ ಬಕ್ಕಸದ , ಬಿ.ಎಸ್ ಮನ್ನೂರ ಮತ್ತು ತಾಂತ್ರಿಕ ವಿಭಾಗದ ಸಿಬ್ಬಂದಿ ಎಂ.ಎಸ್ ಚಿಕ್ಕಮಠ, ಆರ್.ಕೆ ಭಡಂಕರ, ರವಿ ಗೋಮಪ್ಪನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande