ಹೊಸಪೇಟೆ, 11 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದರೋಡೆ ಮಾಡಿ, ಕೊಲೆ ಮಾಡಿದ್ದ ಆರೋಪಿಗಳಿಗೆ ನ್ಯಾಯಾಲಯವು 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ಅವರು ಈ ಮಾಹಿತಿ ನೀಡಿದ್ದು, ಹೊಸಪೇಟೆಯ ರಾಣಿಪೇಟೆಯಲ್ಲಿ ಕುಮಾರಿ ಎ.ವಿ. ಶಿವಭೂಷಣ ಹಾಗೂ ಅವರ ಅಕ್ಕಳಾದ ಮೃತ ಕುಮಾರಿ ಭುವನೇಶ್ವರಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಆರೋಪಿ ಕೃಷ್ಣ ದೇವೇಂದ್ರ ತಡಸದ ಸಂತ್ರಸ್ತರ 22.20.2021ರ ದಂಉ ಸಂಜೆ 5 ರಿಂದ 7 ಗಂಟೆಯ ಸುಮಾರಿಗೆ ಸಂತ್ರಸ್ತರ ಮನೆಯ ಒಳಗಡೆ ಹೋಗಿ, ಮಾಯಮಾಟದ ವಿಚಾರ ಹೇಳಿ, ಮನೆಯಲ್ಲಿದ್ದವರನ್ನು ಕಟ್ಟಿಹಾಕಿ, ದರೋಡೆ ಮಾಡಿ, ಭುವನೇಶ್ವರಿಯನ್ನು ಕೊಲೆ ಮಾಡಿ, ಮನೆಯಲ್ಲಿದ್ದ 8 ಲಕ್ಷ ರೂಪಾಯಿ ಬೆಲೆ ಬಾಳುವ 270 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣ ರೂ. 10,000/- ಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಗಾಯಾಳು ಎ.ವಿ. ಶಿವಭೂಷಣ ಅವರು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೊಸಪೇಟೆಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹಿಮಾನ್ ಎ. ನಂದಗಡಿ ಅವರು ಕೃಷ್ಣ ದೇವೇಂದ್ರ ತಡಸದ, ನೌಷದ್ ಅಲಿ, ತೈಬಜುಲ್ಲಾ, ನಾಗರಾಜ, ಬೀರೇಶ, ಗೀತಾ ರಂಗಣ್ಣನವರ, ಪ್ರಮೀಳಾ ಜಿ.ಎಲ್., ಮಾಲತೇಶಪ್ಪ, ಮಾರುತಿ ಅವರಿಗೆ ತಲಾ 10 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ರೂ.3.15,000/- ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳು ಸಾದಾ ಜೈಲು ವಾಸ ಅನುಭವಿಸತಕ್ಕದ್ದು ಎಂದು ಹಾಗೂ ದಂಡದ ಮೊತ್ತದಲ್ಲಿ ಪರಿಹಾರವಾಗಿ ರೂ.1,50,000/- ಹಣವನ್ನು ಭುವನೇಶ್ವರಿ ಅವರ ಸಹೋದರಿಗೆ ನೀಡಬೇಕು. ಗಾಯಾಳುವಿಗೆ ರೂ.75,000/- ಹಣವನ್ನು ಪಾವತಿಸಬೇಕು ಎಂದು ತೀರ್ಪು ನೀಡಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್