ಸಂಡೂರು, 10 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸಂಡೂರು ಪಟ್ಟಣದ ಆಶ್ರಯ ಕಾಲೋನಿಯ ಟ್ರಾಕ್ಸ್ ಡ್ರೈವರ್ ಕೆಲಸ ಮಾಡುತ್ತಿದ್ದ ಕಾರ್ತಿಕ್ ಶಿಂಧೆ (34) ಕಾಣೆಯಾಗಿರುವ ಕುರಿತು ಸಂಡೂರು
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಎಂದು ಪೊಲೀಸ್ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ:
ಎತ್ತರ 5.6 ಅಡಿ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ತಲೆ ಕೂದಲು, ಬಲಗೈ ಮತ್ತು ಎಡಗೈ ಹೆಬ್ಬೆರಳ ಮೇಲೆ ಚಾರು ಹಾಗೂ ಚರಣ್ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ.
ಕಾಣೆಯಾದ ಸಂದರ್ಭದಲ್ಲಿ ಸಿಮೆಂಟ್ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಬ್ಲಾಕ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಮರಾಠಿ, ಹಿಂದಿ ಮಾತಾನಾಡುತ್ತಾನೆ.
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಡೂರು ಪೊಲೀಸ್ ಠಾಣೆಯ ದೂ.08395-260248,267252 ಪಿಎಸ್‍ಐ ಮೊ.9916460754, ಪಿಐ ಮೊ.9480803061 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್