ಭುವನೇಶ್ವರ್, 10 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಇಂದು ಸಂಜೆ ನಡೆಯುವ ಇಂಡಿಯನ್ ಸೂಪರ್ ಲೀಗ್ ಪುಟ್ಬಾಲ್ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಮತ್ತು ಪಂಜಾಬ್ ಎಫ್‌ಸಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸೋಲುಗಳಿಂದ ಚೇತರಿಸಿಕೊಳ್ಳಲು ಸಿದ್ಧವಾಗಿವೆ. ಒಡಿಶಾ ಎಫ್‌ಸಿ 25 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದು, ಪಂಜಾಬ್ ಎಫ್‌ಸಿ 23 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಎರಡು ತಂಡಗಳಿಗೆ ಗೆಲವು ಅನಿವಾರ್ಯವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa