ಸಿರವಾರ- ಪ್ರಜಾಸೌಧ ಸೇರಿ ಕಾಮಗಾರಿಗಳಿಗೆ ಸಚಿವ ಎನ್ಎಸ್ ಬೋಸರಾಜು, ಶಾಸಕ ಹಂಪಯ್ಯ ನಾಯಕ್ ಭೂಮಿ ಪೂಜೆ
ಸಿರವಾರ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ನೂತನ ಸಿರವಾರ ತಾಲೂಕಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹಂತಹಂತವಾಗಿ ಪೈರೈಸಲಾಗುತ್ತಿದೆ. ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ಪ್ರಜಾ ಸೌಧವನ್ನು ನಿರ
ಸಿರವಾರ- ಪ್ರಜಾಸೌಧ ಸೇರಿ ವಿವಿಧ ಕಾಮಗಾರಿಗಳಿಗೆ ಸಚಿವ ಎನ್ಎಸ್ ಬೋಸರಾಜು, ಶಾಸಕ ಹಂಪಯ್ಯ ನಾಯಕ್ ಭೂಮಿ ಪೂಜೆ


ಸಿರವಾರ- ಪ್ರಜಾಸೌಧ ಸೇರಿ ವಿವಿಧ ಕಾಮಗಾರಿಗಳಿಗೆ ಸಚಿವ ಎನ್ಎಸ್ ಬೋಸರಾಜು, ಶಾಸಕ ಹಂಪಯ್ಯ ನಾಯಕ್ ಭೂಮಿ ಪೂಜೆ


ಸಿರವಾರ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನೂತನ ಸಿರವಾರ ತಾಲೂಕಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹಂತಹಂತವಾಗಿ ಪೈರೈಸಲಾಗುತ್ತಿದೆ. ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಈ ಪ್ರಜಾ ಸೌಧವನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರಜಾಸೌಧ ನಿರ್ಮಾಣದ ನಂತರ ವಿವಿಧ ಇಲಾಖೆಗಳ ಅಧಿಕಾರಿಗಳು ಒಂದೆಡೆ ಸಿಗುವುದರಿಂದ ಸಾರ್ವಜನಿಕರ ಅಲೆದಾಟ ತಪ್ಪುತ್ತದೆ’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.

ಸಿರವಾರ ಪಟ್ಟಣದಲ್ಲಿ ಪ್ರಜಾ ಸೌಧ, ಅಗ್ನಿಶಾಮಕ ಠಾಣೆ ಹಾಗೂ ಕ್ರೀಡಾಂಗಣ ಕಾಮಗಾರಿ, ಸಿರವಾರ ಮುಖ್ಯ, ಗ್ರಂಥಾಲಯ, ವಸತಿ‌ ನಿಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎನ್ಎಸ್ ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಭೂಮಿ ಪೂಜೆ ನೆರವೇರಿಸಿದರು.

₹8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ, 3 ಕೋಟಿ ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ, 4 ಕೋಟಿ ವೆಚ್ಚದಲ್ಲಿ ತಾಲೂಕ ಕ್ರೀಡಾಂಗಣ, 50 ಲಕ್ಷ ರೂ ವೆಚ್ಚದಲ್ಲಿ ತಾಲೂಕ ಹೈಟೆಕ್ ಗ್ರಂಥಾಲಯ ಸೇರಿದಂತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ತಾಲೂಕ ಕ್ರೀಡಾಂಗಣ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಬೇಗ-ಬೇಗ ಮುಗಿಸಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸಬೇಕಾಗಿದೆ. ಅಲ್ಲದೆ ಒಂದೇ ಸೂರಿನಡಿಯಲ್ಲಿ ಎಲ್ಲಾ ಸೌಲಭ್ಯ ಒದಗಿಸುವ ಪ್ರಜಾ ಸೌಧ ಕಟ್ಟಡ ಕಾಮಗಾರಿಯನ್ನು ಸಹ ತ್ವರಿತಗತಿಯಲ್ಲಿ ಪ್ರಾರಂಭಿಸಿ ಒಂದೇ ಸೂರಿನಡಿ ಸೌಲಭ್ಯ ಕಲ್ಪಿಸಲು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ. ಹಾಗೂ ತಾಲೂಕ ಅಗ್ನಿ ಶಾಮಕ ಠಾಣೆ ಕಾಮಗಾರಿ ನಿರ್ವಹಣೆ ಸಂದರ್ಭದಲ್ಲಿ ಅಧಿಕಾರಿಗಳು ಮುಂದೆ ನಿಂತು ಮಾಡಿಸಬೇಕೆಂದು ತಿಳಿಸಿದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನೂತನ ತಾಲೂಕುಗಳಿಗೆ ಹೆಚ್ಚಿನ ಮತದಾನ ಬಿಡುಗಡೆ ಮಾಡುವ ಮೂಲಕ ಸರ್ವಾಂಗಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರಾದ ಅಶೋಕ ಪವಾರ್, ಮುಖಂಡರಾದ ಚುಕ್ಕಿ ಸೂಗಪ್ಪ, ಶರಣಯ್ಯ ನಾಯಕ, ಬ್ರಿಜ್ಜೆಶ ಪಾಟೀಲ್, ಗಫೂರ್ ಸಾಬ್, ಭೂಪನಗೌಡ, ಗಿರಿಜಾ ಶಂಕರ, ಮಲ್ಲಿಕಾರ್ಜುನ್, ಶಿವಕುಮಾರ ಚುಕ್ಕಿ, ದಾನಗೌಡ, ಅರಕೇರಾ ಶಿವಕುಮಾರ್, ಹಸನ್ ಅಲೀ, ಹೆಚ್ ಕೆ ಅಮರೇಶ, ನಾಗಪ್ಪ, ದುರುಗಣ್ಣ ನಾಯಕ, ನಾಗರಾಜ, ಬಸವರಾಜ ಕಲ್ಲೂರು, ವಾಸು ಬಾಬು, ಸುಬ್ಬರಾವ್, ರಡ್ಡೆಪ್ಪ ತಾಂಡ, ಅಮರೇಶ ತಾಯಣ್ಣ ನಾಯ್ಕ ಸೇರಿದಂತೆ ಅನೇಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande