
ಜಕಾರ್ತ, 03 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಇತ್ತೀಚೆಗೆ ತಾಕಿದ ಚಂಡಮಾರುತದ ನಂತರ ತೀವ್ರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಿ ಕನಿಷ್ಠ 712 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 402ಕ್ಕೂ ಹೆಚ್ಚು ಮಂದಿ ಕಾಣೆಯಾಗಿರುವ ಮಾಹಿತಿ ಲಭ್ಯವಾಗಿದೆ.
ಉತ್ತರ ಸುಮಾತ್ರ, ಪಶ್ಚಿಮ ಸುಮಾತ್ರ ಹಾಗೂ ಅಚೆ ಪ್ರಾಂತ್ಯಗಳು ಅತ್ಯಂತ ಹೆಚ್ಚು ಬಾಧಿತವಾಗಿದ್ದು, ಎರಡು ಅಪರೂಪದ ಉಷ್ಣವಲಯದ ಚಂಡಮಾರುತಗಳ ಪರಿಣಾಮವಾಗಿ ಉಂಟಾದ ಅತಿವೃಷ್ಟಿ ದ್ವೀಪದಲ್ಲಿ ವ್ಯಾಪಕ ನಾಶಮಾಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಮಿಲಿಟರಿ, ಪೊಲೀಸ್ ಮತ್ತು ಸ್ವಯಂಸೇವಕರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅನೇಕ ಸೇತುವೆಗಳು, ರಸ್ತೆಗಳು ಕುಸಿದಿರುವ ಕಾರಣ ಪೀಡಿತ ಪ್ರದೇಶಗಳಿಗೆ ನೆರವು ತಲುಪಿಸಲು ತೊಂದರೆ ಉಂಟಾಗಿದೆ. ಲಕ್ಷಾಂತರ ಮಂದಿ ಮನೆ ಕಳೆದುಕೊಂಡಿದ್ದು, ಆಹಾರ–ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ.
ಸ್ಥಳೀಯ ಅಧಿಕಾರಿಗಳು ಈ ಬಿಕ್ಕಟ್ಟನ್ನು ಸ್ಥಳೀಯ ಮಟ್ಟದಲ್ಲಿ ನಿಭಾಯಿಸಲು ಅಸಾಧ್ಯವೆಂದು ಹೇಳಿದ್ದಾರೆ. ಏಳು ದಿನಗಳ ನಂತರವೂ ಅನೇಕ ಹಳ್ಳಿಗಳು ಸಂಪರ್ಕವಿಲ್ಲದೆ ಉಳಿದಿವೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa