ಮದ್ಯ ಮಾರಾಟ ಸನ್ನದು ನೀಡಲು ಬಿಡ್ ದಾರರಿಗೆ ನೊಂದಣಿಗೆ ಅರ್ಜಿ ಆಹ್ವಾನ
ಹೊಸಪೇಟೆ, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅಬಕಾರಿ ಇಲಾಖೆಯಿಂದ ಭಾರತೀಯ ಮತ್ತು ವಿದೇಶ ಮದ್ಯ ಎರಡನ್ನು ಮಾರಾಟ ಮಾಡಲು ಯಶ್ವಸಿ ಹೆಚ್-1 ಬಿಡ್ಡರ್ ಗಳಿಗೆ ಸಿಎಲ್-2ಎ ಮತ್ತು ಸಿಎಲ್-9ಎ ನಮೂನೆಗಳಲ್ಲಿ ಖಾಲಿಯಿರುವ ಅಬಕಾರಿ ಸನ್ನದು ನೀಡಲು ಬಿಡ್ಡರ್ ಗಳಿಂದ ಬಿಡ್‌ಗಳನ್ನು ಆಹ್ವಾನಿಸಲಾಗಿದೆ ಎಂದು ಅಬಕ
ಮದ್ಯ ಮಾರಾಟ ಸನ್ನದು ನೀಡಲು ಬಿಡ್ ದಾರರಿಗೆ ನೊಂದಣಿಗೆ ಅರ್ಜಿ ಆಹ್ವಾನ


ಹೊಸಪೇಟೆ, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅಬಕಾರಿ ಇಲಾಖೆಯಿಂದ ಭಾರತೀಯ ಮತ್ತು ವಿದೇಶ ಮದ್ಯ ಎರಡನ್ನು ಮಾರಾಟ ಮಾಡಲು ಯಶ್ವಸಿ ಹೆಚ್-1 ಬಿಡ್ಡರ್ ಗಳಿಗೆ ಸಿಎಲ್-2ಎ ಮತ್ತು ಸಿಎಲ್-9ಎ ನಮೂನೆಗಳಲ್ಲಿ ಖಾಲಿಯಿರುವ ಅಬಕಾರಿ ಸನ್ನದು ನೀಡಲು ಬಿಡ್ಡರ್ ಗಳಿಂದ ಬಿಡ್‌ಗಳನ್ನು ಆಹ್ವಾನಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಈ ಪ್ರಕ್ರಿಯೆ ಇ-ಹರಾಜುhttps://www.mstcecommerce.comವೆಬ್‌ಸೈಟ್ ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ (ಎಲ್‌ಓಎ) ನೀಡುವ ವರ್ಷವನ್ನು ಒಳಗೊಂಡಂತೆ 2025-26 ರಿಂದ 2029-30 ರವರೆಗೆ ಅಬಕಾರಿ ಐದು ವರ್ಷಗಳ ಅವಧಿ ನೀಡಲಾಗುವುದು.

ವಿಜಯನಗರ ಜಿಲ್ಲೆಯಲ್ಲಿ ಒಟ್ಟು 10 ಸಿಎಲ್-2ಎ ಸನ್ನದುಗಳನ್ನು ಹಂಚಿಕೆ ಮಾಡಿದ್ದು, ಹಗರಿಬೊಮ್ಮನಹಳ್ಳಿಗೆ ಸಿಎಲ್-2ಎ (02), ಹಡಗಲಿಗೆ ಸಿಎಲ್-2ಎ (02), ಹರಪನಹಳ್ಳಿಗೆ ಸಿಎಲ್-2ಎ- (01), ಹೊಸಪೇಟೆಗೆ ಸಿಎಲ್-2ಎ (03) ಮತ್ತು ಕೂಡ್ಲಿಗಿಯಲ್ಲಿ ಸಿಎಲ್-2ಎ (01) ಎಲ್ಲಾ ತಾಲೂಕುಗಳಿಗೆ ಹಂಚಿಕೆ ಮಾಡಿರುವುದರಿಂದ ಡಿ.22 ರಂದು ಬಿಡ್‌ದಾರರ ನೊಂದಣಿ ಪ್ರಾರಂಭಿಸಲಾಗಿದೆ. ಸಂಭಾವ್ಯ ಬಿಡ್‌ದಾರರಿಗೆ ಹಾಗೂ ಜಿಲ್ಲಾ ಇ-ಹರಾಜು ನೋಡಲ್ ತರಬೇತಿಯನ್ನು ಡಿ.23 ರಿಂದ ಜ.07 ರವರೆಗೆ ತರಬೇತಿ ನಡೆಸಲಾಗುತ್ತದೆ. ಜ.13 ರಿಂದ ಜ.20 ರವರೆಗೆ ನೇರ ಹರಾಜು ನಡೆಯುತ್ತದೆ. ಇ-ಹರಾಜಿಗೆ ಸಂಬಂಧಿಸಿದ ವಿವರವಾದ ಇಲಾಖೆಯhttps://stateexcise.karnataka.gov.in ವೆಬ್‌ಸೈಟ್ ನಲ್ಲಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂ.8762342678 ಮತ್ತು 08394-200250 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande