ಕೃತಕ ಬುದ್ಧಿಮತ್ತೆ(ಎಐ)ಯು ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆ ತರಲಿದೆ : ಡಾ.ರಮೇಶ ಅರೋಲಿ
ರಾಯಚೂರು, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೃತಕ ಬುದ್ಧಿಮತ್ತೆ(ಎಐ) ಪ್ರಾಯೋಗಿಕವಾಗಿ ಪ್ರತಿಯೊಂದು ಕೇತ್ರದಲ್ಲೂ ಹಲವಾರು ಆವಿಷ್ಕಾರಗಳ ಮೂಲಕ ಕ್ರಾಂತಿಕಾರಕ ಬದಲಾವಣೆಯ ಬೆಳವಣಿಗೆಯನ್ನು ಕಾಣುತ್ತಿದೆ, ಸಂಶೋಧನೆಗಳಿಂದ ಇಂದು ಎಐ ತಂತ್ರಜ್ಞಾನ ಜಗತ್ತಿಗೆ ಹಬ್ಬಿದ್ದು, ಆಧುನಿಕ ಮಾನವನ ಜೀವನದ ಒಂದು ಭ
ಕೃತಕ ಬುದ್ಧಿಮತ್ತೆ(ಎಐ)ಯು ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆ ತರಲಿದೆ: ಡಾ.ರಮೇಶ ಅರೋಲಿ


ರಾಯಚೂರು, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೃತಕ ಬುದ್ಧಿಮತ್ತೆ(ಎಐ) ಪ್ರಾಯೋಗಿಕವಾಗಿ ಪ್ರತಿಯೊಂದು ಕೇತ್ರದಲ್ಲೂ ಹಲವಾರು ಆವಿಷ್ಕಾರಗಳ ಮೂಲಕ ಕ್ರಾಂತಿಕಾರಕ ಬದಲಾವಣೆಯ ಬೆಳವಣಿಗೆಯನ್ನು ಕಾಣುತ್ತಿದೆ, ಸಂಶೋಧನೆಗಳಿಂದ ಇಂದು ಎಐ ತಂತ್ರಜ್ಞಾನ ಜಗತ್ತಿಗೆ ಹಬ್ಬಿದ್ದು, ಆಧುನಿಕ ಮಾನವನ ಜೀವನದ ಒಂದು ಭಾಗವಾಗಿದೆ. ಕೃತಕ ಬುದ್ಧಿಮತ್ತೆ ಮಾಧ್ಯಮ ಕ್ಷೇತ್ರದಲ್ಲಿ ಹೊಸ ವಿಚಾರಗಳ ನಿರ್ಮಾಣದಲ್ಲಿ ಸಹಾಯ ಮಾಡುತ್ತಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ರಮೇಶ ಅರೋಲಿ ತಿಳಿಸಿದರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಲಾಗಿದ್ದ ‘ಕೃತಕ ಬುದ್ಧಿಮತ್ತೆ(ಎಐ) ಕಾಲದಲ್ಲಿ ವರದಿಗಾರಿಕೆ: ಸವಾಲು ಮತ್ತು ಸಾಧ್ಯತೆ’ ಕುರಿತು ಪಿಪಿಟಿಯ ಮೂಲಕ ವಿದ್ವತ್ ಪೂರ್ಣವಾಗಿ ವಿಶೇಷ ಉಪನ್ಯಾಸ ಪ್ರಸ್ತುತಪಡಿಸಿದ ಅವರು, ಇಂದು ನಮ್ಮ ದೈನಂದಿನ ಜೀವನವು ಮೊಬೈಲ್ ಸಾಧನಗಳು ಮತ್ತು ಇಂಟರ್ನೆಟ್ಟನ್ನು ಸಂಪೂರ್ಣವಾಗಿ ಅವಲಂಬಿಸಲಾಗಿದೆ. ಸಂಚರಿಸಲು ಮಾರ್ಗಗಳನ್ನು ಹುಡುಕಲು ಹಾಗೂ ಹವಾಮಾನದ ವೈಪರಿತ್ಯಗಳನ್ನು ತಿಳಿಸಲು ಈ ಸಾಧನಗಳ ಬಳಕೆ ಮಾಡುವುದರಿಂದ ನಮ್ಮ ಕೆಲಸಗಳು ಸರಳವಾಗಿವೆ ಮತ್ತು ಮನುಷ್ಯರ ಬೌದ್ಧಿಕ ಮಟ್ಟ ಕುಂಠಿತಗೊಳ್ಳುವ ಸಾಧ್ಯತೆಯೂ ಇದೆ. ಎಐ ಫೋಟೋಗಳು ಮತ್ತು ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದರೆ ಆಗ ಎಐನಿಂದ ಪಡೆಯಲಾಗಿದೆ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಲತಾ.ಎಂ.ಎಸ್. ಮಾತನಾಡಿ, ಸಮೂಹ ಮಾಧ್ಯಮ ವಲಯದಲ್ಲಿ ಕೃತಕ ಬುದ್ಧಿಮತ್ತೆಯ ಮಾಹಿತಿ ಸಂಸ್ಕರಣೆ ಮತ್ತು ವಿಶ್ಲೇಷಣಾ ಸಾಮಥ್ರ್ಯದಿಂದ ಅಪಾರ ಪ್ರಯೋಜನ ಪಡೆದುಕೊಳ್ಳುತ್ತಿದೆ. ಡಿಜಿಟಲ್ ಮಾಧ್ಯಮದ ಮೇಲಿನ ಅವಲಂಬನೆಯೂ ಈಗ ಹೆಚ್ಚಾಗುತ್ತಿದ್ದು, ಎಐ ಆಧಾರಿತ ಸುದ್ದಿಯ ವರದಿಗಾರಿಕೆ ಮತ್ತು ಓದುವಿಕೆಗಳಲ್ಲಿ ಸಾಕಷ್ಟು ಬದಲಾವಣೆ ತರುತ್ತಿದೆ ಎಂದು ಅವರು ಹೇಳಿದರು.

ಅತಿಥಿ ಉಪನ್ಯಾಸಕರಾದ ಡಾ.ಪ್ರಭಾ ಬಸವರಾಜ ಸ್ವಾಮಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಗೀತಮ್ಮ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ಡಾ.ಟಿ.ಎಸ್. ಗೋರವರ ಅತಿಥಿಯನ್ನು ಪರಿಚಯಿಸಿ, ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande