ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿಯ ಬೇಡಿಕೆ ಈಡೇರಿಕೆಗೆ ಕೋಮುಲ್ ಆಡಳಿತ ಮಂಡಳಿ ಒಪ್ಪಿಗೆ
ಹಾಲು ಉತ್ಪಾದಕರ ಸಂಘಗಳ ಸಿಬ್ಬಂದಿಯ ಬೇಡಿಕೆ ಈಡೇರಿಕೆಗೆ ಕೋಮುಲ್ ಆಡಳಿತ ಮಂಡಳಿ ಒಪ್ಪಿಗೆ
ಹಾಲು ಉತ್ಪಾದಕರ ಸಂಘಗಳ ನೌಕರರ ಬೇಡಿಕೆಗಳನ್ನು ಈಡಿಕೆಗಳನ್ನು ಮಾಡಲು ಒಪ್ಪಿದ ಆಡಳಿತ ಮಂಡಳಿಗೆ ನೌಕರರ ಸಂಘದಿAದ ಅಭಿನಂದನೆ ಸಲ್ಲಿಸಲಾಯಿತು.


ಕೋಲಾರ, ೨೪ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಪ್ರಾಥಮಿಕ ಹಾಲು ಸಂಘಗಳ ಸಿಬ್ಬಂದಿಯ ವಯೋನಿವೃತ್ತಿಗೆ ೫ ಲಕ್ಷ ಸೇರಿದಂತೆ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಲ್ಲಿಸಿದ್ದ ಮನವಿಯನ್ನು ಕೋಮುಲ್ ಆಡಳಿತ ಮಂಡಳಿಯು ಸ್ಪಂದಿಸಿ ಈಡೇರಿಸಲು ಒಪ್ಪಿಗೆ ಸೂಚಿಸಿದ್ದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್ ಒಕ್ಕೂಟ ಹಾಗೂ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಅಭಿನಂದನೆ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಮಂಗಳವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಸಿಬ್ಬಂದಿಯ ವಯೋನಿವೃತ್ತಿ ೫ ಲಕ್ಷ, ಜೊತೆಗೆ ಏಕರೂಪ ತಂತ್ರಾ0ಶವನ್ನು (ಕಾಮನ್) ಸಾಫ್ಟವೇರ್ ಅಳವಡಿಸಲು ಸಿಬ್ಬಂದಿಗೆ ಪ್ರತಿ ಲೀಟರ್ ಗೆ ೩೦ ಪೈಸೆ ಬದಲಿಗೆ ೪೦ ಪೈಸೆ ಹೆಚ್ಚಳ ಮಾಡಲಾಗಿದೆ ಅಕಾಲಿಕ ಮರಣ ಹೊಂದಿದ ಸಿಬ್ಬಂದಿಗೆ ೫ ಲಕ್ಷ ಕೊಡುವುದು ಉಳಿದಂತೆ ಬೇಡಿಕೆಗಳನ್ನು ಹಂತಹAತವಾಗಿ ಪರಿಶೀಲಿಸಿ ಕ್ರಮ ವಹಿಸಲು ಒಕ್ಕೂಟದ ಆಡಳಿತ ಮಂಡಳಿ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ

ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶ್ ಗೌಡ, ಉಪಾಧ್ಯಕ್ಷ ಮಿಂಡಹಳ್ಳಿ ಮುನಿರಾಜು, ಖಜಾಂಚಿ ವಕ್ಕಲೇರಿ ನಾಗರಾಜ್, ತಾಲೂಕು ಅಧ್ಯಕ್ಷ ತೊಂಡಾಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಿ.ತಿಮ್ಮೇಗೌಡ, ಉಪಾಧ್ಯಕ್ಷ ಗಂಗಾಪುರ ಬಾಬು ಪದಾಧಿಕಾರಿಗಳಾದ, ಮದನಹಳ್ಳಿ ರಮೇಶ್, ಪುರಹಳ್ಳಿ ದೇವರಾಜ್, ತೊಕಲಘಟ್ಟ ರವಿ, ಶ್ರೀರಂಗಪುರ ರವಿ, ಕೋಗಿಲೇರಿ ಸುಬ್ರಮಣಿ ಅಭಿನಂದನೆ ಸಲ್ಲಿಸಿದರು.

ಚಿತ್ರ : ಹಾಲು ಉತ್ಪಾದಕರ ಸಂಘಗಳ ನೌಕರರ ಬೇಡಿಕೆಗಳನ್ನು ಈಡಿಕೆಗಳನ್ನು ಮಾಡಲು ಒಪ್ಪಿದ ಆಡಳಿತ ಮಂಡಳಿಗೆ ನೌಕರರ ಸಂಘದಿ0ದ ಅಭಿನಂದನೆ ಸಲ್ಲಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

 rajesh pande