ಕುಕನೂರು ವ್ಯಕ್ತಿ ಕಾಣೆ
ಕೊಪ್ಪಳ, 24 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಎರಡೂವರೆ ವರ್ಷದ ಹಿಂದೆ ಬೆಂಗಳೂರಿಗೆ ಅಡುಗೆ ಭಟ್ಟನಾಗಿ ಕೆಲಸಕ್ಕೆ ತೆರಳಿದ್ದ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದ ಷಣ್ಮುಕಪ್ಪ ಬಸಪ್ಪ ಹೊಸಳ್ಳಿ(33)ಕಾಣೆಯಾಗಿದ್ದು ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನೆ ನಂ: 89/2025 ಕಲಂ ಮನುಷ್ಯ ಕಾಣೆ
ಕುಕನೂರು ವ್ಯಕ್ತಿ ಕಾಣೆ


ಕೊಪ್ಪಳ, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಎರಡೂವರೆ ವರ್ಷದ ಹಿಂದೆ ಬೆಂಗಳೂರಿಗೆ ಅಡುಗೆ ಭಟ್ಟನಾಗಿ ಕೆಲಸಕ್ಕೆ ತೆರಳಿದ್ದ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದ ಷಣ್ಮುಕಪ್ಪ ಬಸಪ್ಪ ಹೊಸಳ್ಳಿ(33)ಕಾಣೆಯಾಗಿದ್ದು ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನೆ ನಂ: 89/2025 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ನಾಪತ್ತೆಯಾದ ವ್ಯಕ್ತಿಯು 2023ರ ಫೆಬ್ರವರಿ 18 ರಂದು ಅಡುಗೆಭಟ್ಟನ ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದರು. ಆಗಾಗ ಕುಟುಂಬದೊಂದಿಗೆ ಫೋನ್ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು. ಆದರೆ ಕಳೆದ ಎಂಟು ತಿಂಗಳುಗಳಿಂದ ಯಾವುದೇ ಸಂಪರ್ಕ ಇಲ್ಲದ ಕಾರಣ, ವ್ಯಕ್ತಿಯನ್ನು ಬೆಂಗಳೂರು ಹಾಗೂ ಇತರೆ ಸಂಬಂಧಿಕರಲ್ಲಿ ಹುಡುಕಾಡಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ.

ಕಾಣೆಯಾದ ವ್ಯಕ್ತಿಯ ಚಹರೆ:

ಕಾಣೆಯಾದ ವ್ಯಕ್ತಿಯು 5.6 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ತುಂಬುತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.

ಮೇಲ್ಕಂಡ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ದೂ.ಸಂ: 08534-230333, ಮೊ.ಸಂ: 9480803750, ಇ-ಮೇಲ್: ಞuಞಚಿಟಿooಡಿಞಠಿಟ@ಞsಠಿ.gov.iಟಿ ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಕುಕನೂರು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande