
ಕೊಪ್ಪಳ, 24 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕುಕನೂರಿನ ಜೆ.ಜೆ.ಕಾಲೋನಿ ನಿವಾಸಿ ದೇವರಾಜ ಗಂಗಪ್ಪ ಇಲಕಲ್ಲ(25) ಕಾಣೆಯಾಗಿದ್ದು, ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುನ್ನೆ ನಂ: 108/2025 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ ಎಂದು ಕುಕನೂರು ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ನಾಪತ್ತೆಯಾದ ಯುವಕನು ಈ ಹಿಂದೆ ಕೊಪ್ಪಳದ ಸಾವಿತ್ರಿ ಎಂಬ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದು, ಈ ವಿಷಯ ಎರಡೂ ಕುಟುಂಬದವರಿಗೆ ತಿಳಿದು, ಇಬ್ಬರಿಗೂ ಬುದ್ದಿವಾದ ಹೇಳಿದ್ದರು. ನಂತರ ಯುವಕನು ಇದೇ ಫೆಬ್ರವರಿಯಲ್ಲಿ ಮೊಟಾರ ಬೈಕ್ ಚಲಾಯಿಸುವಾಗ ಅಪಘಾತ ಸಂಭವಿಸಿ, ಬಲಗಾಲಿಗೆ ಪೆಟ್ಟಾಗಿತ್ತು. ಸುಮಾರು 2-3 ತಿಂಗಳುಗಳ ಕಾಲ ವಿಶ್ರಾಂತಿಯ ನಂತರ ಯುವಕ ವ್ಯಾಪಾರ ಪ್ರಾಂರಭಿಸಿದ್ದನು. ಆದರೆ ಇದೇ ಆಗಸ್ಟ್ 18 ರಂದು ಸಂಜೆ ಸುಮಾರು 5.30 ಗಂಟೆಗೆ ಬಹಿರ್ದೆಸೆಗೆ ತೆರಳುವುದಾಗಿ ಹೋಗಿದ್ದು, ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಇದೇ ಸಮಯ ಕೊಪ್ಪಳದ ಸಾವಿತ್ರಿ ಎಂಬ ಮಹಿಳೆ ಕೂಡ ಕಾಣೆಯಾಗಿದ್ದು, ಯುವಕ ಮತ್ತು ಮಹಿಳೆ ಇಬ್ಬರೂ ಜೊತೆಯಾಗಿ ಹೋಗಿರುವ ಸಂಶಯವಿದೆ ಎಂದು ಯುವಕನ ಕುಟುಂಬದವರು ದೂರು ದಾಖಲಿಸಿದ್ದಾರೆ
.
ಕಾಣೆಯಾದ ಯುವಕನ ಚಹರೆ:
ಕಾಣೆಯಾದ ಯುವಕನು 5.3 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದಾನೆ. ಕನ್ನಡ ಮತ್ತು ಕುಂಚಿಕೊರವರ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬೂದು ಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದನು.
ಮೇಲ್ಕಂಡ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ದೂ.ಸಂ: 08534-230333, ಮೊ.ಸಂ: 9480803750, ಇ-ಮೇಲ್: ಞuಞಚಿಟಿooಡಿಞಠಿಟ@ಞsಠಿ.gov.iಟಿ ಗೆ ಸಂಪರ್ಕಿಸಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್