ಶಾಲಾ ಪಡಿತರ ; ಟೆಂಡರ್‍ನಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಭಾಗಿಯಾಗಿಲ್ಲ-ಸ್ಪಷ್ಟೀಕರಣ
ಕೊಪ್ಪಳ, 24 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಶಾಲೆಗಳಿಗೆ ಪಡಿತರ ಸರಬರಾಜು ಟೆಂಡರ್‍ನಲ್ಲಿ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿರುವುದಿಲ್ಲವೆಂದು ಕೊಪ್ಪಳ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಕೆಲವು ದಿನ ಪತ್ರ
ಶಾಲಾ ಪಡಿತರ ; ಟೆಂಡರ್‍ನಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಭಾಗಿಯಾಗಿಲ್ಲ-ಸ್ಪಷ್ಟೀಕರಣ


ಕೊಪ್ಪಳ, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಶಾಲೆಗಳಿಗೆ ಪಡಿತರ ಸರಬರಾಜು ಟೆಂಡರ್‍ನಲ್ಲಿ ಆಹಾರ ಸುರಕ್ಷತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿರುವುದಿಲ್ಲವೆಂದು ಕೊಪ್ಪಳ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕೆಲವು ದಿನ ಪತ್ರಿಕೆಗಳಲ್ಲಿ ಬಿಸಿಊಟದಲ್ಲಿ ಹುಳುಗಳ ಕುರಿತು ಕೊಪ್ಪಳ ಜಿಲ್ಲೆಯ ಆಹಾರ ಸುರಕ್ಷತೆ ಇಲಾಖೆ ಕಾರಣರಾಗಿದ್ದಾರೆ ಮತ್ತು ಶಾಲೆಗಳಿಗೆ ಸರಬರಾಜು ಆಗುವ ಪಡಿತರದ ಟೆಂಡರ್ ನಲ್ಲಿ ಕೊಪ್ಪಳ ಜಿಲ್ಲೆಯ ಆಹಾರ ಸುರಕ್ಷತೆ ಇಲಾಖೆ ಭಾಗವಹಿಸಿ ಗುತ್ತಿಗೆದಾರರೊಂದಿಗೆ ಸಂಪರ್ಕ ಬೆಳೆಸಿ ಕಳಪೆ ಪಡಿತರ ವಿತರಣೆಗೆ ಕಾರಣರಾಗಿರುತ್ತಾರೆ ಎಂದು ವರದಿಯಾಗಿರುತ್ತದೆ. ಆದರೆ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಗೋದಾಮು ಸರ್ಕಾರಿ ಸಂಸ್ಥೆಯಾಗಿದ್ದು, ಪಡಿತರ ಆಹಾರ ಸಾಮಾಗ್ರಿಗಳ ಸರಬರಾಜು ಮತ್ತು ಟೆಂಡರ್ ಅನ್ನು ರಾಜ್ಯಮಟ್ಟದಿಂದ ಮತ್ತು ಕೇಂದ್ರದಿಂದ ಆಗಿರುತ್ತದೆ. ಈ ಟೆಂಡರ್‍ನಲ್ಲಿ ಆಹಾರ ಸುರಕ್ಷತೆ ಇಲಾಖೆಯ ಕೊಪ್ಪಳ ಜಿಲ್ಲೆಯ ಅಂಕಿತ ಅಧಿಕಾರಿಗಳು ಭಾಗವಹಿಸಿರುವುದಿಲ್ಲ.

ಸರ್ಕಾರಿ ಶಾಲೆಗಳಿಗೆ ಆಹಾರ ಮಾದರಿಯನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಗೋದಾಮಿನಿಂದ ಪೂರೈಗೆ ಆಗುತ್ತಿದ್ದು, ಸರ್ಕಾರಿ ಶಾಲೆಗಳಿಗೆ ವಿತರಣೆ ಆಗುತ್ತಿರುವ ಆಹಾರ ಮಾದರಿಗಳನ್ನು ಕಾಲಕಾಲಕ್ಕೆ ರಾಜ್ಯದ ಮಾರ್ಗಸೂಚಿಯಂತೆ ಹೊಸ ಸ್ಟಾಕ್ ಬಂದಾಗ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ ಮತ್ತು ಶಾಲೆಗಳಲ್ಲಿಯೂ ಕೂಡ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂಕಿತ ಅಧಿಕಾರಿಗಳಾದ ಡಾ. ಅಲಕನಂದ ಮಳಗಿ ಮತ್ತು ಸಿಬ್ಬಂಧಿಯವರು ಶಾಲೆಗಳಿಗೆ ಸರಬರಾಜು ಆಗುವ ಆಹಾರ ಪದಾರ್ಥಗಳ ಟೆಂಡರ್ ಮಾಡಿದ್ದು, ಗುತ್ತಿಗೆದಾರರೊಂದಿಗೆ ಕೈಜೋಡಿಸಿದ್ದಾರೆ ಎಂದು ವರದಿಯಾಗಿರುವುದು ಆಧಾರರಹಿತ ಅಪಾದನೆ ಸತ್ಯಕ್ಕೆ ದೂರವಾಗಿದ್ದು, ನೈತಿಕತೆಯನ್ನು ಕುಗ್ಗಿಸುವಂತಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಗೋದಾಮಿನಿಂದ ಆಹಾರ ಮಾದರಿಗಳನ್ನು ಸಂಗ್ರಹಿಸಿರುವ ವಿವರ ಈ ರೀತಿಯಾಗಿದ್ದು, 2023-24ನೇ ಸಾಲಿನಲ್ಲಿ 3 ಆಹಾರ ಮಾದರಿಗಳನ್ನು, 2024-25ನೇ ಸಾಲಿನಲ್ಲಿ 37 ಆಹಾರ ಮಾದರಿಗಳನ್ನು ಮತ್ತು 2025-26 ನೇ ಸಾಲಿನಲ್ಲಿ 17 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಆಹಾರ ಮಾದರಿಗಳನ್ನು ಸಂಗ್ರಹಿಸಿರುವ ವಿವರ ಈ ರೀತಿಯಾಗಿದ್ದು, 2023-24ನೇ ಸಾಲಿನಲ್ಲಿ 20 ಆಹಾರ ಮಾದರಿಗಳನ್ನು, 2024-25 ನೇ ಸಾಲಿನಲ್ಲಿ 35 ಆಹಾರ ಮಾದರಿಗಳನ್ನು ಮತ್ತು 2025-2 ನೇ ಸಾಲಿನಲ್ಲಿ 46 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಈ ಮೂಲಕ ಸ್ಪಷ್ಟೀಕರಿಸಿದೆ ಎಂದು ಕೊಪ್ಪಳ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಂಕಿತ ಅಧಿಕಾರಿಗಳ ಕಾರ್ಯಾಲಯದ ತಿಳಿಸಿದೆ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande