ಅಬಕಾರಿ ಇಲಾಖೆಯಿಂದ ಇ-ಹರಾಜು ; ಬಿಡ್ ಆಹ್ವಾನ
ಕೊಪ್ಪಳ, 24 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅಬಕಾರಿ ಇಲಾಖೆಯಲ್ಲಿ ಭಾರತೀಯ ಮದ್ಯ ಅಥವಾ ವಿದೇಶ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಇ-ಹರಾಜು ನಡೆಸುತ್ತಿದ್ದು, ಬಿಡ್‍ಗಳನ್ನು ಆಹ್ವಾನಿಸಿದೆ. ಅಬಕಾರಿ ಇಲಾಖೆ ಭಾರತೀಯ ಮದ್ಯ ಅಥವಾ ವಿದೇಶ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಯಶಸ್ವಿ ಹೆಚ್-1 ಬಿ
ಅಬಕಾರಿ ಇಲಾಖೆಯಿಂದ ಇ-ಹರಾಜು ; ಬಿಡ್ ಆಹ್ವಾನ


ಕೊಪ್ಪಳ, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅಬಕಾರಿ ಇಲಾಖೆಯಲ್ಲಿ ಭಾರತೀಯ ಮದ್ಯ ಅಥವಾ ವಿದೇಶ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಇ-ಹರಾಜು ನಡೆಸುತ್ತಿದ್ದು, ಬಿಡ್‍ಗಳನ್ನು ಆಹ್ವಾನಿಸಿದೆ.

ಅಬಕಾರಿ ಇಲಾಖೆ ಭಾರತೀಯ ಮದ್ಯ ಅಥವಾ ವಿದೇಶ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಯಶಸ್ವಿ ಹೆಚ್-1 ಬಿಡ್ ಗಳಿಗೆ ಸಿ.ಎಲ್-2ಎ ಮತ್ತು ಸಿ.ಎಲ್-9ಎ ನಮೂನೆಗಳಲ್ಲಿ ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದು ನೀಡಲು ಬಿಡ್‍ದಾರರಿಂದ ಬಿಡ್‍ಗಳನ್ನು ಆಹ್ವಾನಿಸಿದೆ. ಈ ಪ್ರಕ್ರಿಯೆಯು ಇ-ಹರಾಜು ವೆಬ್‍ಸೈಟ್ https://www.msicecommerce.com ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ (ಎಲ್‍ಒಎ) ನೀಡುವ ವರ್ಷವನ್ನು ಒಳಗೊಂಡಂತೆ ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ.

ಇ-ಹರಾಜಿಗೆ ಸಂಬಂಧಿಸಿದ ವಿವರವಾದ ಮಾರ್ಗಸೂಚಿಗಳು ಇಲಾಖೆಯ ವೆಬ್‍ಸೈಟ್ https://stateexcise.karnataka.gov.in ನಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08539-222002, 222001, ಮೊ.ಸಂ. 9449597170 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande