
ಕೋಲಾರ, ೨೪ ಡಿಸೆಂಬರ್ ೨೪ (ಹಿ.ಸ) :
ಆ್ಯಂಕರ್ : ಈ ದಿನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಹೊರಗಿನ ಅಮೂಲ್ಯ ಪಾಠವನ್ನು ಕಲಿಸಿದೆ. ಈ ಜಾನಪದ ಹಾಡುಗಳ ಮೂಲಕ ಅವರು ನಮ್ಮ ನಾಡಿನ ಬೇರುಗಳನ್ನು, ಸಂಸ್ಕೃತಿಯ ಸೊಬಗನ್ನು ಮತ್ತು ಸಮುದಾಯದ ಸಂಗೀತವನ್ನು ಆಳವಾಗಿ ಅರಿತುಕೊಳ್ಳುವ ಅಪೂರ್ವ ಅವಕಾಶ ಸಿಕ್ಕಿದೆ ಎಂದು ಎಂದು ಕೀಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎನ್. ಸರೋಜಮ್ಮ ತಿಳಿಸಿದರು.
ಕೋಲಾರ ನಗರದ ಕೀಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕೋಲಾರ ವತಿಯಿಂದ ತಿಂಗಳ ಬೆಳದಿಂಗಳ ಅಂಗಳದಲ್ಲೊ0ದು ಜಾನಪದ ಹಾಡು ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾವಿದರು ಹೇಳಿಕೊಟ್ಟ ಪ್ರತಿ ಹಾಡು, ಪ್ರತಿ ಸಾಲು ನಮ್ಮ ಇತಿಹಾಸ, ನಂಬಿಕೆಗಳು ಮತ್ತು ಮೌಲ್ಯಗಳ ಬಿಂಬವಾಗಿತ್ತು. ಇಂತಹ ಕಾರ್ಯಕ್ರಮಗಳು ಬಾಲ ಮನಸ್ಸಿನಲ್ಲಿ ಸಾಂಸ್ಕೃತಿಕ ಗೌರವ ಮತ್ತು ರಾಷ್ಟçಪ್ರೇಮದ ಬೀಜವನ್ನು ನೆಡುತ್ತವೆ. ಇದು ಕೇವಲ ಮನೋರಂಜನೆಯ ಮಟ್ಟಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಒಂದು ಜೀವಂತ ಶೈಕ್ಷಣಿಕ ಅನುಭವವಾಗಿತ್ತು. ಕಾರ್ಯಕ್ರಮವನ್ನು ಆಯೋಜಿಸಿದ ಸಂಸ್ಥೆ ಮತ್ತು ಅದರ ಕಲಾವಿದರಿಗೆ ನಮ್ಮ ಹೃತ್ಪೂರ್ವ ವಂದನೆಗಳು ಎಂದರು.
ಜಾನಪದ ಕಲಾವಿದ ಬಿ.ವೆಂಕಟಾಚಲಪತಿ ಮತ್ತು ಕುಡುವನಹಳ್ಳಿ ಗಣೇಶಪ್ಪ ರವರು ಜಾನಪದ ಗೀತೆಗಳು, ನಾಡಗೀತೆ, ರಾಷ್ಟ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವುದು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು.
ಶಾಲಾ ಶಿಕ್ಷಕರಾದ ಅನಿತ.ಟಿ.ಎಲ್, ಲಕ್ಷ್ಮೀ.ಎಂ, ಕಲಾವತಿ.ಆರ್, ಮಂಜುಳ.ಜಿ, ವಿಶ್ವನಾಥ್.ಕೆ.ಬಿ., ರತ್ನಾಬಾಯಿ.ಆರ್. ಸ್ವಪ್ನ.ಎಸ್. ಉಪಸ್ಥಿತರಿದ್ದರು.
ಚಿತ್ರ : ಕೋಲಾರ ನಗರದ ಕೀಲುಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈನೆಲ ಈಜಲ ಸಂಸ್ಥೆಯಿ0ದ ಜಾನಪದ ಹಾಡು ಕಾರ್ಯಕ್ರಮ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್