ಕೃಷ್ಣ ಬೈರೇಗೌಡರ ವಿರುದ್ದ ಷಡ್ಯಂತ್ರ ; ವಿರೋಧಿಗಳಿಂದ ಸುಳ್ಳು ಆರೋಪ
ಕೃಷ್ಣಬೈರೇಗೌಡರ ವಿರುದ್ದ ಷಡ್ಯಂತ್ರ ; ವಿರೋಧಿಗಳಿಂದ ಸುಳ್ಳು ಆರೋಪ
ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಕೃಷ್ಣಬೈರೇಗೌಡರ ವಿರುದ್ಧ ವಿರೋಧಿಗಳು ಷÀಡ್ಯಂತರ ಮಾಡಿ ಭೂ-ಕಬಳಿಕೆ ಆರೋಪ ಮಾಡಿರುವುದಾಗಿ ತಿಳಿಸಿದರು.


ಕೋಲಾರ, ೨೪ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಕಂದಾಯ ಸಚಿವ ಕೃಷ್ಣಬೈರೇಗೌಡರ ಮೇಲೆ ಸುಳ್ಳು ಆರೋಪ ಹೊರಿಸಿ ಅವರ ವಿರುದ್ದ ಷಡ್ಯಂತ್ರದ ಮೂಲಕ ಅವರ ವ್ಯಕ್ತಿತ್ವಕ್ಕೆ ಕಪ್ಪ ಚುಕ್ಕೆ ತರುವ ಕೆಲಸವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು ಆರೋಪಿಸಿದರು.

ಕೋಲಾರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಕೃಷ್ಣ ಬೈರೇಗೌಡರ ಊರಿನ ಜೊತೆ ನಮಗೆ ದಶಕಗಳ ಸಂಬ0ಧವಿದೆ ಅವರ ತಾತ ಚೌಡೇಗೌಡರ ಕಾಲದಿಂದ ಜಮೀನಿಗೆ ಸಂಬ0ಧಿಸಿದ ದಾಖಲೆಗಳು ಹಾಗೆಯೇ ಇದೆ ಅ ಜಮೀನನ್ನು ಮೂರು ಭಾಗ ಮಾಡಿದ ಮೇಲೆ ಪಾಳುಬಿದ್ದಿತ್ತು ನಂತರ ದಿವಂಗತ ಸಿ.ಬೈರೇಗೌಡರು ತೋಟ ಮಾಡಿ ಅಭಿವೃದ್ಧಿ ಮಾಡಲಾಗುತ್ತಿತ್ತು ಅಲ್ಲಿ ಎರಡು ಕೆರೆ ಇವೆ ಅವುಗಳನ್ನು ಕೃಷ್ಣಬೈರೇಗೌಡರು ಹೂಳು ತೆಗೆದು ಅಭಿವೃದ್ಧಿ ಪಡಿಸಿದ್ದಾರೆ ಎಂದರು

ಸುಮಾರು ೨೫೬ ಎಕರೆ ಜಾಗವಿದ್ದು ಒತ್ತುವರಿ ಸಾಧ್ಯ ಇಲ್ಲ. ಬೈರೇಗೌಡ ರೀತಿ ಕೃಷ್ಣ ಬೈರೇಗೌಡ ಕೂಡ ದಕ್ಷ ಆಡಳಿತಗಾರ ಕಂದಾಯ ಇಲಾಖೆಯನ್ನು ಸುಧಾರಣೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಏಳಿಗೆ ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ಬಿಜೆಪಿ ಸೇರಿ ಆರೋಪ ಮಾಡಿದ್ದಾರೆ. ಅವರು ಬೆಳೆಯುವುದನ್ನು ಯಾರೂ ಅಡ್ಡಹಾಕಲು ಆಗಲ್ಲ ಆರೋಪಗಳು ಎಲ್ಲವೂ ಸುಳ್ಳು ಅವರ ವಿರುದ್ಧ ಷಡ್ಯಂತ್ರದಲ್ಲಿ ಕೆಲವು ಕಾಂಗ್ರೆಸ್ ನವರೂ ಇರಬಹುದು ಮುಂದೆ ಸತ್ಯ ಹೊರ ಬರಲಿದೆ ಎಂದರು.

ಕಾಂಗ್ರೆಸ್ ಎಸ್ಸಿ ಘಟಕದ ರಾಜ್ಯ ಕಾರ್ಯದರ್ಶಿ ಬೆಳಗಾನಹಳ್ಳಿ ಮುನಿವೆಂಕಟಪ್ಪ ಮಾತನಾಡಿ ಸಚಿವ ಕೃಷ್ಣಬೈರೇಗೌಡರ ವರ್ಚಸ್ಸನ್ನು ಸಹಿಸದ ಕೆಲವರು ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಅವರಿಗೆ ನಮ್ಮ ಬೆಂಬಲವಿದೆ ಅ ಜಮೀನು ಅವರ ಪೂರ್ವಜರಿಂದ ಬಂದಿರುವ ದಾಖಲೆಗಳಿವೆ ಆದರೂ ವಿರೋಧ ಪಕ್ಷದವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ ಅವರ ವಿರುದ್ದದ ಹುನ್ನಾರವಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಮಾತನಾಡಿ ರಾಜ್ಯಾದ್ಯಂತ ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮಾಡಿ ಸುಧಾರಣೆ ಮಾಡಿದ್ದಾರೆ ಒಳ್ಳೆಯ ಹೆಸರು ಗಳಿಸಿರುವ ಕೃಷ್ಣ ಬೈರೇಗೌಡರು ಅವರ ತಾತನ ಕಾಲದಲ್ಲಿ ಅಗಿರುವ ಪ್ರಕ್ರಿಯಾಗಿದ್ದರು ವಿರೋಧ ಪಕ್ಷದವರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ವಿನಾಕಾರಣ ಬಿಜೆಪಿ ಪಕ್ಷದವರು ತಹಶೀಲ್ದಾರ್ ಕಚೇರಿ ಮುಂದೆ ಕಾವಲು ಕಾಯುತ್ತೇವೆ ಎಂದು ನೀಚ ರಾಜಕಾರಣ ಮಾಡುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಇವತ್ತು ಮನುವಾದಿ ನಾರಾಯಣಸ್ವಾಮಿಯಾಗಿದ್ದಾರೆ ಅವರ ವೃತ್ತಿ ಪ್ರಾಮಾಣಿಕತೆಗೆ ಧಕ್ಕೆ ತರಲು ಹೊರಟಿದ್ದಾರೆ ಎಂದು ಆರೋಪಿಸಿದರು

ಪತ್ರಿಕಾಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್, ಗ್ರಾಮಾಂತರ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಎಸ್ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್, ಸೂಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಮುಖಂಡರಾದ ಖಯ್ಯಾಮ್, ಶ್ರೀರಾಮ್, ಖಾದ್ರಿಪುರ ಬಾಬು ಉಪಸ್ಥಿತರಿದ್ದರು.

ಚಿತ್ರ : ಕೋಲಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಕೃಷ್ಣಬೈರೇಗೌಡರ ವಿರುದ್ಧ ವಿರೋಧಿಗಳು ಷಡ್ಯಂತರ ಮಾಡಿ ಭೂ-ಕಬಳಿಕೆ ಆರೋಪ ಮಾಡಿರುವುದಾಗಿ ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್

 rajesh pande