
ವಿಜಯಪುರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರೀಯ ಹೆದ್ದಾರಿ 52ರ ಟೋಲ್‌ನಲ್ಲಿ ಎಂಎಲ್‌ಸಿನ್ನು ಸಿಬ್ಬಂದಿಗಳು ತಡೆದು ಅನುಚಿತ ವರ್ತನೆ ಮಾಡಿರುವ ಘಟನೆ ವಿಜಯಪುರ ನಗರದ ಹೊರವಲಯದಲ್ಲಿರುವ ಬೆಂಗಳೂರು - ಸೋಲಾಪುರ ಹೈವೇಯ ಟೋಲ್‌ನಲ್ಲಿ ನಡೆದಿದೆ.
ಎಂ ಎಲ್ ಸಿ ಕೇಶವಪ್ರಸಾದ್ ಪಾಸ್ ಹಾಗೂ ಪಿಎ ಮೊಬೈಲ್ ಕಸಿದುಕೊಂಡ ಟೋಲ್ ಮಹಿಳಾ ಸಿಬ್ಬಂದಿ ಅನುಚಿತ ವರ್ತನೆ ಮಾಡಿದ್ದಾರೆ. ಬರೋಬ್ಬರಿ ಒಂದು ಗಂಟೆ ಕಾಲ ಎಂಎಲ್‌ಸಿಯನ್ನು ತಡೆದು ಗೊಂದಲ ಸೃಷ್ಟಿಸಿದ್ದಾರೆ.
ಮೊಬೈಲ್, ಪಾಸ್ ಕಸಿದು ಯಾರಿಗೆ ಹೇಳ್ತಿರಾ ಹೇಳಿ, ನೀವು ಎಂ ಎಲ್ ಸಿ ಎಂದು ನಾವು ಹೇಗೆ ನಂಬೋದು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿಗೆ ಟೋಲ್ ಸಿಬ್ಬಂದಿ ದುರ್ವರ್ತನೆ ಬಗ್ಗೆ ಎಂ ಎಲ್ ಸಿ ಕೇಶವಪ್ರಸಾದ ಮಾಹಿತಿ ನೀಡಿದರು.
ತಕ್ಷಣವೇ ಸ್ಥಳಕ್ಕೆ ಗ್ರಾಮೀಣ ಪೊಲಿಸ್ ಠಾಣಾ ಪೊಲೀಸರು ದೌಡಾಯಿಸಿ, ಸಮಸ್ಯೆ ಆಲಿಸಿದರು. ಇನ್ನೂ ಸ್ಥಳದಲ್ಲಿ ಬಿಜೆಪಿ ಕಾರ್ತಕರ್ತರು ಕೂಡ ಜಮಾವಣೆಗೊಂಡು, ಟೋಲ್ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ತರಾಟೆ ತೆಗೆದುಕೊಂಡರು. ಅನುಚಿತ ವರ್ತನೆಗೈದಿರುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
ನಂತರ ಪೊಲೀಸರಿಂದ ಗೊಂದಲ ನಿವಾರಣೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande