ಬಾಂಗ್ಲಾ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಆರೋಗ್ಯ ಸ್ಥಿತಿ ಗಂಭೀರ
ಢಾಕಾ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಎವರ್‌ಕೇರ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಅವರ ಗಂಭೀರ ಸ್ಥಿತಿಯನ್ನು ಮನಗಂಡು ದೇಶದ ಮಧ್ಯಂತರ ಸರ್ಕಾರವು
Khalida


ಢಾಕಾ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಎವರ್‌ಕೇರ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಅವರ ಗಂಭೀರ ಸ್ಥಿತಿಯನ್ನು ಮನಗಂಡು ದೇಶದ ಮಧ್ಯಂತರ ಸರ್ಕಾರವು ಅವರನ್ನು ತಕ್ಷಣದಿಂದಲೇ ವಿವಿಐಪಿ ಎಂದು ಘೋಷಿಸಿ, ವಿಶೇಷ ಭದ್ರತಾ ಪಡೆ ನಿಯೋಜಿಸಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಖಲೀದಾ ಜಿಯಾ ಅವರ ಶೀಘ್ರ ಚೇತರಿಕೆಗೆ ಹಾರೈಸಿದ್ದು, ಅಗತ್ಯವಿದ್ದರೆ ಭಾರತ ಸಹಾಯಕ್ಕೆ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಲಂಡನ್‌ನಲ್ಲಿ ವಾಸಿಸುತ್ತಿರುವ ಅವರ ಮಗ ತಾರಿಕ್ ರೆಹಮಾನ್ ತಾಯಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶಕ್ಕೆ ಮರಳಲು ಸಿದ್ಧತೆ ಆರಂಭಿಸಿರುವುದಾಗಿ ಪಕ್ಷದ ನಾಯಕರು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ BNP ಉಪಾಧ್ಯಕ್ಷ ಅಹ್ಮದ್ ಅಜಮ್ ಖಾನ್ , ಶನಿವಾರ ರಾತ್ರಿ ನಂತರದಿಂದ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬಂದಿಲ್ಲ. “ಪ್ರಾರ್ಥನೆ ಹೊರತುಪಡಿಸಿ ಈಗ ನಮ್ಮ ಬಳಿ ಬೇರೆ ಮಾರ್ಗವಿಲ್ಲ” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande