ಭಾರತೀಯ ರಸ್ತೆ ಕಾಂಗ್ರೆಸ್ 84ನೇ ವಾರ್ಷಿಕ ಸಮಾವೇಶ
ಭುವನೇಶ್ವರ, 07 ನವೆಂಬರ್ (ಹಿ.ಸ.) : ಆ್ಯಂಕರ್ : ಭಾರತೀಯ ರಸ್ತೆ ಕಾಂಗ್ರೆಸ್ ನ 84ನೇ ವಾರ್ಷಿಕ ಸಮಾವೇಶವು ಇಂದು ಭುವನೇಶ್ವರದ ಜನತಾ ಮೈದಾನದಲ್ಲಿ ಪ್ರಾರಂಭವಾಗಲಿದೆ. ಈ ಸಮಾವೇಶವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜಂಟ
ಭಾರತೀಯ ರಸ್ತೆ ಕಾಂಗ್ರೆಸ್ 84ನೇ ವಾರ್ಷಿಕ ಸಮಾವೇಶ


ಭುವನೇಶ್ವರ, 07 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ರಸ್ತೆ ಕಾಂಗ್ರೆಸ್ ನ 84ನೇ ವಾರ್ಷಿಕ ಸಮಾವೇಶವು ಇಂದು ಭುವನೇಶ್ವರದ ಜನತಾ ಮೈದಾನದಲ್ಲಿ ಪ್ರಾರಂಭವಾಗಲಿದೆ. ಈ ಸಮಾವೇಶವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ನಾಲ್ಕು ದಿನಗಳ ಕಾಲ ನವೆಂಬರ್ 10 ರವರೆಗೆ ನಡೆಯಲಿರುವ ಈ ಸಮಾವೇಶವು ದೇಶದ ರಸ್ತೆ ಅಭಿವೃದ್ಧಿ ಕ್ಷೇತ್ರದ ಪ್ರಮುಖ ತಜ್ಞರ ಸಮ್ಮಿಲನವಾಗಲಿದೆ.

ಈ ಕಾರ್ಯಕ್ರಮದಲ್ಲಿ ದೇಶದಾದ್ಯಂತದ ರಸ್ತೆ ಎಂಜಿನಿಯರ್‌ಗಳು, ನೀತಿ ನಿರೂಪಕರು, ಸಂಶೋಧಕರು, ಉದ್ಯಮ ತಜ್ಞರು ಹಾಗೂ ವಿಶ್ವದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳು ಸೇರಿದಂತೆ ಸುಮಾರು 3,500 ಕ್ಕೂ ಹೆಚ್ಚು ಜನ ಭಾಗವಹಿಸುವರು. ರಸ್ತೆ ಮತ್ತು ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿಯ ಸವಾಲುಗಳು, ಸುರಕ್ಷತಾ ಕ್ರಮಗಳು, ನವೀನ ತಂತ್ರಜ್ಞಾನಗಳು ಹಾಗೂ ಸ್ಥಿರ ಅಭಿವೃದ್ಧಿಗೆ ಅಗತ್ಯವಾದ ನೀತಿಗಳ ಕುರಿತು ವಿವಿಧ ತಾಂತ್ರಿಕ ಅಧಿವೇಶನಗಳು ನಡೆಯಲಿವೆ.

ಈ ವರ್ಷದ IRC ಸಮಾವೇಶದ ಪ್ರಧಾನ ವಿಷಯ “ಹೆದ್ದಾರಿ ತಂತ್ರಜ್ಞಾನ ಮತ್ತು ನೀತಿಯಲ್ಲಿ ಪ್ರಮುಖ ಪ್ರಗತಿಗಳು” ಭಾರತದ ರಸ್ತೆ ಮೂಲಸೌಕರ್ಯ ಕ್ಷೇತ್ರದಲ್ಲಿ ನವೀನ ತಂತ್ರಜ್ಞಾನ ಹಾಗೂ ದೀರ್ಘಾವಧಿಯ ನೀತಿ ಚರ್ಚೆಗೆ ಮಾರ್ಗದರ್ಶಿಯಾಗಲಿದೆ.

ಸಮಾವೇಶದ ಅಂಗವಾಗಿ ರಸ್ತೆ ಸುರಕ್ಷತೆ, ಗ್ರೀನ್ ಕಾರಿಡಾರ್ ಅಭಿವೃದ್ಧಿ, ಹಾಗೂ ಸ್ಮಾರ್ಟ್ ರಸ್ತೆ ತಂತ್ರಜ್ಞಾನಗಳ ಕುರಿತು ಪ್ರದರ್ಶನ ಹಾಗೂ ತಾಂತ್ರಿಕ ಸಂವಾದಗಳು ಕೂಡ ನಡೆಯಲಿವೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಸಂಯುಕ್ತ ಆಶ್ರಯದಲ್ಲಿ ಈ ಮಹಾಸಮ್ಮೇಳನ ಆಯೋಜಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande