ವಂದೇ ಮಾತರಂ 150ನೇ ವರ್ಷದ ಸಂಭ್ರಮಕ್ಕೆ ಇಂದು ಚಾಲನೆ
ನವದೆಹಲಿ, 07 ನವೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರಗೀತೆ ವಂದೇ ಮಾತರಂ ರಚನೆಯ 150ನೇ ವರ್ಷದ ಸ್ಮರಣಾರ್ಥವಾಗಿ ವರ್ಷಪೂರ್ತಿ ನಡೆಯಲಿರುವ ರಾಷ್ಟ್ರೀಯ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರ
Pm


ನವದೆಹಲಿ, 07 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಗೀತೆ ವಂದೇ ಮಾತರಂ ರಚನೆಯ 150ನೇ ವರ್ಷದ ಸ್ಮರಣಾರ್ಥವಾಗಿ ವರ್ಷಪೂರ್ತಿ ನಡೆಯಲಿರುವ ರಾಷ್ಟ್ರೀಯ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರು ಅಂಚೆ ಚೀಟಿ ಮತ್ತು ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡುವರು.

ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆಯ ಪ್ರಕಾರ, ಈ ಆಚರಣೆಗಳು 2026ರ ನವೆಂಬರ್ 7ರವರೆಗೆ ರಾಷ್ಟ್ರವ್ಯಾಪಿಯಾಗಿ ನಡೆಯಲಿದ್ದು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಮತ್ತು ಇಂದಿಗೂ ರಾಷ್ಟ್ರ ಏಕತೆ ಹಾಗೂ ಹೆಮ್ಮೆಯನ್ನು ಬಿಂಬಿಸುತ್ತಿರುವ ಈ ಅಮರ ಕೃತಿಯ ಶತಾರ್ಧೋತ್ಸವದ ಮಹತ್ವವನ್ನು ಸ್ಮರಿಸಲು ಉದ್ದೇಶಿಸಲಾಗಿದೆ.

ಆಚರಣೆಯ ಅಂಗವಾಗಿ ಇಂದು ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ವಂದೇ ಮಾತರಂನ ಪೂರ್ಣ ಆವೃತ್ತಿಯನ್ನು ಸಾಮೂಹಿಕವಾಗಿ ಹಾಡಲಾಗುವುದು. ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ಸಾಮಾಜಿಕ ವೇದಿಕೆಗಳಲ್ಲಿ ಎಲ್ಲಾ ವರ್ಗದ ಜನರು ಭಾಗವಹಿಸಲಿದ್ದಾರೆ.

1875ರಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರು ಅಕ್ಷಯ ನವಮಿಯಂದು ವಂದೇ ಮಾತರಂ ಅನ್ನು ರಚಿಸಿದ್ದರು. ನಂತರ ಅದು ಅವರ ಪ್ರಸಿದ್ಧ ಕಾದಂಬರಿ “ಆನಂದಮಠ” ನ ಭಾಗವಾಯಿತು. ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಸಂಕೇತವಾಗಿ ಮಾತೃಭೂಮಿಗೆ ಅರ್ಪಿತವಾದ ಈ ಗೀತೆ ಭಾರತದ ಜಾಗೃತ ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವಾಭಿಮಾನದ ಶಾಶ್ವತ ಪ್ರತೀಕವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande