ಮೆಕ್ಕೆಜೋಳ ಬೆಲೆ ಕುಸಿತ : ಮುಖ್ಯಮಂತ್ರಿ ನೇತೃತ್ವದಲ್ಲಿ ತುರ್ತು ಸಭೆ
ಬೆಂಗಳೂರು, 21 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಮೆಕ್ಕೆಜೋಳ ಬೆಲೆ ದಿಡೀರ್ ಕುಸಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಉತ್ಪಾದನೆ ಹೆಚ್ಚಳ, ಅತಿಯಾದ ಆಮದು ಮತ್ತು ನೋಡಲ್ ಏಜೆನ್ಸಿಗಳ ನಿಧಾನ ಕಾರ್ಯವೈಖರಿ ಈ ಸಂಕಷ್ಟಕ್ಕೆ
Cm meeting


ಬೆಂಗಳೂರು, 21 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಮೆಕ್ಕೆಜೋಳ ಬೆಲೆ ದಿಡೀರ್ ಕುಸಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು.

ಉತ್ಪಾದನೆ ಹೆಚ್ಚಳ, ಅತಿಯಾದ ಆಮದು ಮತ್ತು ನೋಡಲ್ ಏಜೆನ್ಸಿಗಳ ನಿಧಾನ ಕಾರ್ಯವೈಖರಿ ಈ ಸಂಕಷ್ಟಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ರಾಜ್ಯ ಮತ್ತು ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಗಣನೀಯವಾಗಿ ಹೆಚ್ಚಿರುವುದು ದರ ಕುಸಿತಕ್ಕೆ ಮೂಲ ಕಾರಣವಾಗಿದೆ, ಇದು ಗೊತ್ತಿದ್ದು ಕೇಂದ್ರ ಸರ್ಕಾರ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಆಮದು ಮಾಡಿಕೊಂಡಿರುವುದು ರೈತರ ಮೇಲೆ ತೀವ್ರ ಹೊರೆ ತಂದಿದೆ ಎಂದು ಸಭೆಯಲ್ಲಿ ಚರ್ಚೆಯಾಯಿತು.

ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿದ ಕೇಂದ್ರದ ನೀತಿಯಿಂದಲೂ ರಾಜ್ಯಕ್ಕೆ ಹಿನ್ನಡೆ ಉಂಟಾಗಿದೆ. ಎಥೆನಾಲ್‌ಗೆ ರಾಜ್ಯಕ್ಕೆ ನಿಗದಿ ಮಾಡಿರುವ ಕೋಟಾ ಪ್ರಮಾಣ ಅತ್ಯಲ್ಪವಾಗಿರುವುದರಿಂದ ಡಿಸ್ಟಿಲರಿಗಳು ಮೆಕ್ಕೆಜೋಳ ಖರೀದಿಯಲ್ಲಿ ಆಸಕ್ತಿ ತೋರುತ್ತಿಲ್ಲ. ಕೇಂದ್ರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹೊರಡಿಸಿದ ಮಾರ್ಗಸೂಚಿಯಂತೆ ನಾಫೆಡ್ ಮತ್ತು ಎನ್ಸಿಸಿಎಫ್ ಏಜೆನ್ಸಿಗಳು ಇನ್ನೂ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಯನ್ನು ಆರಂಭಿಸದಿರುವುದು ಮಾರುಕಟ್ಟೆ ಧಾರಣೆ ಕುಸಿಯಲು ಪ್ರಮುಖ ಕಾರಣವಾಗಿದೆ.

ಸಭೆಯಲ್ಲಿ, ಡಿಸ್ಟಿಲರಿಗಳು ಹಿಂದೆಯೇ ಬೆಲೆ ಕಡಿಮೆಯಿದ್ದಾಗ ಶೇಖರಣೆ ಮಾಡಿಕೊಂಡಿರುವುದರಿಂದ ಈಗ ಖರೀದಿಗೆ ಮುಂದಾಗದಿರುವುದು ನಿಯಮ ಉಲ್ಲಂಘನೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ದೇಶದಲ್ಲಿ ಉತ್ಪಾದನೆ ಹೆಚ್ಚಿರುವ ಸಂದರ್ಭದಲ್ಲಿ ಮೆಕ್ಕೆಜೋಳ ಆಮದು ತಕ್ಷಣ ನಿಯಂತ್ರಿಸಲು ಕೇಂದ್ರಕ್ಕೆ ಪತ್ರ ಬರೆಯಲು ಸಭೆಯಲ್ಲಿ ತಿರ್ಮಾನಿಸಲಾಯಿತು.

ನಾಫೆಡ್/ಎನ್ಸಿಸಿಎಫ್ ಮುಖೇನ 8 ಲಕ್ಷ ಟನ್ ಮೆಕ್ಕೆಜೋಳ ತುರ್ತು ಖರೀದಿ ಪ್ರಾರಂಭಿಸುವ ಬಗ್ಗೆ ಒತ್ತಡ ಹೇರುವುದು.

ಖರೀದಿ ಕೇಂದ್ರಗಳನ್ನು ತಕ್ಷಣ ಕಾರ್ಯಾರಂಭ ಮಾಡಲು ಸೂಚನೆ ನೀಡುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ , “ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಎಲ್ಲ ರೀತಿಯ ಸಹಾಯ ಒದಗಿಸುತ್ತದೆ” ಎಂದು ಭರವಸೆ ನೀಡಿದರು.

ದೇಶೀಯ ಉತ್ಪಾದನೆ ಸಾಕಷ್ಟಿರುವುದರಿಂದ, ಆಮದು ನಿರ್ಬಂಧಿಸಲು ಕೇಂದ್ರಕ್ಕೆ ತಕ್ಷಣ ಪತ್ರ ಬರೆಯಲು ಅವರು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಪ್ರಮುಖ ಡಿಸ್ಟಿಲರಿಗಳೊಂದಿಗೆ ತುರ್ತು ಸಭೆ ನಡೆಸಿ ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿ ತ್ವರಿತಗೊಳಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಅದೇ ರೀತಿ ಕುಕ್ಕುಟೋದ್ಯಮದ ಮೆಕ್ಕೆಜೋಳ ಬೇಡಿಕೆ ಕುರಿತೂ ಮಾತುಕತೆ ನಡೆಸಿ ಖರೀದಿಗೆ ಉತ್ತೇಜನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande