ಹೈ ಕಮಾಂಡ್ ತೀರ್ಮಾನವೇ ಅಂತಿಮ : ಸಚಿವ ಪಾಟೀಲ
ವಿಜಯಪುರ, 16 ನವೆಂಬರ್ (ಹಿ.ಸ.) : ಆ್ಯಂಕರ್ : ಕಾಂಗ್ರೆಸ್ ಹಾಗೂ ದೆಹಲಿಯ ನಾಯಕರು ಬಿಹಾರ ಚುನಾವಣೆ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವಿಶ್ಲೇಷಣೆ ನಂತರ ಸತ್ಯ ತಿಳಿಯಲಿದೆ. ಫಲಿತಾಂಶದಿಂದ ಒಂದು ರೀತಿ ಸಂಶಯ ಉತ್ಪತ್ತಿ ಆಗಿದೆ
ಪಾಟೀಲ


ವಿಜಯಪುರ, 16 ನವೆಂಬರ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಹಾಗೂ ದೆಹಲಿಯ ನಾಯಕರು ಬಿಹಾರ ಚುನಾವಣೆ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವಿಶ್ಲೇಷಣೆ ನಂತರ ಸತ್ಯ ತಿಳಿಯಲಿದೆ. ಫಲಿತಾಂಶದಿಂದ ಒಂದು ರೀತಿ ಸಂಶಯ ಉತ್ಪತ್ತಿ ಆಗಿದೆ ಎಂದರು.

ಅಲ್ಲದೇ, ಬಿಹಾರ ಜನತೆ ತೀರ್ಪು ಕೊಟ್ಟಿದ್ದಾರೆ. ಜನರ ತೀರ್ಪಿಗೆ ನಾವು ತಲೆಬಾಗಿ ಒಪ್ಪುತ್ತೇವೆ. ಮಹಾಘಟಬಂಧನಕ್ಕೆ ಯಾರು ಮತ ಹಾಕಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಮತ ಕಳ್ಳತನ ಆಗಿದ್ದನ್ನ ಆಳಂದಲ್ಲಿ ನೋಡಿದ್ದೇವೆ. ನಮ್ಮ ಬೆಂಗಳೂರು ಸೆಂಟ್ರಲ್‌‌ನಲ್ಲೂ ಮತ ಕಳ್ಳತನದ ಆಗಿದ್ದನ್ನ ನೋಡಿದ್ದೇವೆ. ಕಲೆಕ್ಷನ್ ಕಮೀಷನ್ ರಿಫಾರ್ಮಸ್ ತರಬೇಕು. ಸುಮ್ಮನೆ ಅಫಿಡೆವಿಟ್ ಹಾಕಿ, ಅದು ಮಾಡಿ, ಇದು ಮಾಡಿ ಅಂತಾ ಹೇಳಿದ್ರೆ ಆಗಲ್ಲ. ರಿಫಾರ್ಮ್‌‌ಸ್ ತಂದು ಚುನಾವಣೆ ಇವತ್ತು ಪಾರದರ್ಶಕವಾಗಿ ಆಗಬೇಕು. ಪಾರದರ್ಶಕವಾಗಿ ಚುನಾವಣೆ ಆದ ಮೇಲೆ ಚುನಾವಣೆಯಲ್ಲಿ ಸೋಲು, ಗೆಲುವನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ನವ್ಹಂಬರ್, ಡಿಸೆಂಬರ್ ಕ್ರಾಂತಿ ಏನೆ ಇರಲಿ.

ಕ್ರಾಂತಿ ಆಗುತ್ತೋ ಬಿಡುತ್ತೋ ಕೂಡ ಯಾರ ಕೈಯಲ್ಲೂ ಏನು ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೈ ಕಮಾಂಡ್ ತೀರ್ಮಾನವೇ ಅಂತಿಮ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಹೈಕಮಾಂಡ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇವರೆಲ್ಲರೂ ಏನು ತೀರ್ಮಾನ ಮಾಡ್ತಾರೆ ಅದು ಅಂತಿಮ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande