
ವಿಜಯಪುರ, 15 ನವೆಂಬರ್ (ಹಿ.ಸ.) :
ಆ್ಯಂಕರ್ : ಸದಾ ರಕ್ತಪಾತಕ್ಕೆ ಹೆಸರುವಾಸಿಯಾಗಿರುವ ಭೀಮಾತೀರದಲ್ಲಿ ಇದೀಗ್ ಹನಿಟ್ರ್ಯಾಪ್‌ನಿಂದ ಸುದ್ದಿ ಆಗಿದೆ. ವಿಜಯಪುರ ಜಿಲ್ಲೆಯ ಇಂಡಿ
ಪಟ್ಟಣದಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹನಿಟ್ರ್ಯಾಪ್ ಮಾಡಿಸಿ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆ ವ್ಯಕ್ತಿ (ಬ್ಯಾಂಕ್ ಮ್ಯಾನೇಜರ್) ಪೊಲೀಸ ಠಾಣೆಯ ಮೆಟ್ಟಿಲೇರಿದ್ದಾರೆ.
ಈ ಹನಿಟ್ರ್ಯಾಪ್ ನಡೆಸಿದ ತಾಯಿ ಮಗ ಹಾಗೂ ಯುಟ್ಯೂಬರ್ ಸೇರಿ ನಾಲ್ಕು ಜನರ ವಿರುದ್ದ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ಕುರಿತು ಇಂಡಿ ಶಹರ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇಂಡಿ ಪಟ್ಟಣದ ಡಿ.ವೈ.ಎಸ.ಪಿ ಕಾರ್ಯಾಲಯದ ಪಕ್ಕದಲ್ಲಿರುವ ಪುಟ್‌ಪಾತ್ ರಸ್ತೆಯ ಮೇಲೆ ಎಳೆ ನೀರು ಮಾರುತ್ತಿದ್ದ ಮಹಿಳೆ ಸುವರ್ಣ ಗಂಡ ರಾಹುಲ್ ಹೊನಸೂರೆ, ಮಹಿಳೆಯ ಮಗ ಅಮುಲ್ ರಾಹುಲ್ ಹೊನಸೂರೆ, ಹಂಜಗಿ ಗ್ರಾಮದ ಮಹೇಶ ಬಗಲಿ ಹಾಗೂ ಪತ್ರಕರ್ತ ಎಂದು ಹೇಳಿಕೊಂಡ ವೃತ್ತಿಯಲ್ಲಿ ಹೋಮ್‌ಗಾರ್ಡ ಆಗಿರುವ ತೌಶಿಪ್ ಖರೋಶಿ ಎಂಬುವರು ವ್ಯಕ್ತಿಯೊಬ್ಬನನ್ನು ಫುಸಲಾಯಿಸಿ ದುರುದ್ದೇಶಕ್ಕಾಗಿ ಹನಿಟ್ರಾಪ್ ಖೆಡ್ಡಾಗೆ ಬೀಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ:
ಪಟ್ಟಣದ ಡಿವೈಎಸ್‌ಪಿ ಕಾರ್ಯಾಲಯದ ಪಕ್ಕದ ಎಳನೀರು ಮಾರುತ್ತಿರುವ ಸುವರ್ಣ ರಾಹುಲ್ ಹೊನಸೂರೆ ಎಂಬ ಮಹಿಳೆ ಹಾಗೂ ತನ್ನ ಮಗ ಅಮುಲ್ ರಾಹುಲ್ ಹೊನ್ನಸೂರೆ ಇಬ್ಬರ ಕುತಂತ್ರದಿಂದ ತನ್ನ ಕಡೆ ಬರುವ ಕೆಲವು ಗಿರಾಕಿಗಳಿಗೆ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ನೀಡಿ ಮಹಿಳೆ ಸುವರ್ಣ ತಾನಿರುವ ಸ್ಥಳಕ್ಕೆ ಕರೆಸಿ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ತಿಳಿದು ಬಂದಿದೆ.
ನವೆಂಬರ್ ತಿಂಗಳ ೧ ರಂದು ಸರ್ಕಾರಿ ರಜೆ ಇದ್ದು ಅಂದು ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಫುಸಲಾಯಿಸಲು ಮಹಿಳೆ ಸುವರ್ಣ ರಾಹುಲ್ ಹೊನ್ನಸೂರೆ ತನ್ನ ಮೊಬೈಲ್ ಸಂಖ್ಯೆ ನೀಡಿ ತಾನು ಕೆನರಾ ಬ್ಯಾಂಕ್ ಹಿಂದೆ ಇರುವ ತನ್ನ ಗೆಳತಿ ಮನೆಯಲ್ಲಿ ಇರುವೆ ಅಲ್ಲಿ ಬನ್ನಿ ಅಂತಾ ಹೇಳಿ ಮ್ಯಾನೇಜರ್‌ನನ್ನು ಕರೆಯಿಸಿಕೊಂಡು, ಅಲ್ಲಿ ಮ್ಯಾನೇಜರ್ ಹಾಗೂ ತಾನು ರಾಸಲೀಲೆಯಲ್ಲಿ ತೊಡಗಿದ್ದನ್ನು ಒಂದು ಕಿಟಕಿಯಲ್ಲಿ ಮೋಬಾಯಿಲ್ ಇಟ್ಟು ರೆಕಾರ್ಡ ಮಾಡಿ, ಆ ವೀಡಿಯೋವನ್ನು ತೌಶಿಫ ಹುಸ್ಮಾನಸಾಬ್ ಖುರೇಶಿ (ಹೋಮ್‌ಗಾರ್ಡ) ಹಾಗೂ ಮಹೇಶ ಮಾಳಪ್ಪ ಬಗಲಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಡುವಂತೆ ತಿಳಿಸಿದ್ದಾಳೆ.
‘ವೀಡಿಯೋ ಇಟ್ಟುಕೊಂಡು ತೌಶಿಫ ಹುಸ್ಮಾನಸಾಬ್ ಖರೇಶಿ ಹಾಗೂ ಮಹೇಶ ಮಾಳಪ್ಪ ಬಗಲಿ ಇವರಿಬ್ಬರು ಸೇರಿ ಮ್ಯಾನೇಜರ ಅವರಿಗೆ ಕರೆ ಮಾಡಿ ನಮಗೆ 10 ಲಕ್ಷ ರೂ ನೀಡಿ ಇಲ್ಲದಿದ್ದರೆ ನಿಮ್ಮ ರಾಸಲೀಲೆಯನ್ನು ಪತ್ರಿಕೆ ಹಾಗೂ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡುತ್ತೇವೆ, ಎಂದು ಹೆದರಿಸಿದ್ದಾರೆ.
ಅಲ್ಲದೆ, ಸುವರ್ಣ ಹೊನಸೂರೆ ಸಹ ಮ್ಯಾನೇಜರ್‌ಗೆ ಕರೆ ಮಾಡಿ ಅವರು ಕೇಳುತ್ತಿರುವ 10 ಲಕ್ಷ.ರೂ ಗಳನ್ನು ಕೊಟ್ಟು ಬಿಡಿ, ನನ್ನ ಹಾಗೂ ನಿಮ್ಮ ಮರ್ಯಾದೆ ಉಳಿಯುತ್ತದೆ ಎಂದು ಕಿರುಕುಳ ನೀಡಲು ಪ್ರಾರಂಭಿಸಿದ್ದು ಬೆಸತ್ತ ಬ್ಯಾಂಕ್ ಮ್ಯಾನೇಜರ್ ಇಂಡಿ ಶಹರ ಪೋಲಿಸ್ ಠಾಣೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಇಂತಹ ಹಲವು ಪ್ರಕರಣಗಳು ನಡೆಯುತ್ತಿದ್ದು ಮರ್ಯಾದೆಗೆ ಹೆದರಿ ಸಾಕಷ್ಟು ಜನ ಪೊಲೀಸ್ ಠಾಣೆಗೆ ಹೋಗದೆ ದುಡ್ಡು ಕೊಟ್ಟು ಸುಮ್ಮನಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಇಂತಹ ಹನಿಟ್ರ್ಯಾಪ್ ಮಾಡುವವರ ಹೆಡೆಮುರಿ ಕಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande