ಇಂದಿರಾ ಗಾಂಧಿ, ದೇಶ ಕಂಡ ಅದ್ಭುತ ಶಕ್ತಿ : ಜ್ಯೋತಿ ಗೊಂಡಬಾಳ
ಕೊಪ್ಪಳ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೇಶದ ಇತಿಹಾಸದಲ್ಲಿ ಇಂದಿರಾ ಗಾಂಧಿ ಅವರು ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ಮಹಿಳೆ, ಆಕೆಯನ್ನು ಸ್ವತಃ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಇಂದಿರಾ ಸಿಂಹಿಣಿ ಎಂದು ಲೋಕ ಸಭೆಯಲ್ಲಿಯೇ ಹೊಗಳಿದ್ದು ಅದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ನಾಯಕಿ
ಇಂದಿರಾ ಗಾಂಧಿ ಅವರು ದೇಶ ಕಂಡ ಅದ್ಭುತ ಶಕ್ತಿ : ಜ್ಯೋತಿ ಗೊಂಡಬಾಳ


ಕೊಪ್ಪಳ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೇಶದ ಇತಿಹಾಸದಲ್ಲಿ ಇಂದಿರಾ ಗಾಂಧಿ ಅವರು ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ಮಹಿಳೆ, ಆಕೆಯನ್ನು ಸ್ವತಃ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೇ ಇಂದಿರಾ ಸಿಂಹಿಣಿ ಎಂದು ಲೋಕ ಸಭೆಯಲ್ಲಿಯೇ ಹೊಗಳಿದ್ದು ಅದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ನಾಯಕಿ, ಗ್ಯಾರಂಟಿ ಯೋಜನೆ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ನೆನಪಿಸಿಕೊಂಡರು.

ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ (ಇಂದು) ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವ ಅಂಗವಾಗಿ ಮತ್ತು ಅಕ್ಟೋಬರ್ 31 ರಂದು ನಡೆಯುವ ಇಂದಿರಾ ಗಾಂಧೀಜಿ ಅವರ ಜನ್ಮ ದಿನದ ಪ್ರಯುಕ್ತ ಮಂಡಳಿ ಮೂಲಕ ಹಮ್ಮಿಕೊಂಡ ಜಾಗೃತಿ ಮಾಹಿತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಗೊಂಡಬಾಳ ಅವರು, ಕಾರ್ಖಾನೆಗಳಿಂದ ದೊಡ್ಡ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದ್ದು, ಸ್ಥಳಿಯವಾಗಿ ಕಾರ್ಖಾನೆಗಳು ಹೆಚ್ಚು ತೊಂದರೆ ಉಂಟು ಮಡುತ್ತಿವೆ, ಅದಕ್ಕೆ ಹೊಸ ಕಾರ್ಖಾನೆ ಮತ್ತು ಕಾರ್ಖಾನೆಗಳ ವಿಸ್ತೀರ್ಣ ವಿರೋಧಿಸಿ ಹೋರಾಟಗಳು ನಡೆದಿದ್ದು ಸರಕಾರ ಅದರ ಬಗ್ಗೆ ಗಮನ ಹರಿಸಿಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಜನರು ವಾಹನಗಳನ್ನು ಕಡಿಮೆ ಬಳಸಬೇಕು, ಕಸ ವಿಲೇವಾರಿಯಲ್ಲಿ ಮುನ್ಶಿಪಾಲಿಟಿ ಅವರೊಟ್ಟಿಗೆ ಸಹಕರಿಸಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡದಂತೆ ನಗರವನ್ನು ಸ್ವಚ್ಛವಾಗಿ ಇಡಬೇಕು ಎಂದು ವಿನಂತಿಸಿದರು.

ಕೆಪಿಸಿಸಿ ಮಾರ್ಗದರ್ಶನದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಎಲ್.ಇ.ಡಿ. ಡಿಸ್ಪ್ಲೇ ವಾಲ್ ಹೊಂದಿರುವ ವಾಹನ ಕಳುಹಿಸಿದ್ದು ಅದರ ಮಾಲಿನ್ಯ ನಿಯಂತ್ರಣ ಮತ್ತು ದೇಶದ ಪ್ರಗತಿಗೆ ಇಂದಿರಾಜಿ ಕೊಡುಗೆ ಕುರಿತು ವಿಡಿಯೋ ಪ್ರದರ್ಶನ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾಹನ ಜಿಲ್ಲೆಯಾದ್ಯಂತ ಸಂಚರಿಸಿ ಮೂರು ದಿನ ಮಾಹಿತಿ ನೀಡಲಿದೆ.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಕಿಮ್ಸ್ ಆಡಳಿತ ಮಂಡಳಿ ನಾಮನಿರ್ದೇಶಿತ ಸದಸ್ಯ ಸಲೀಂ ಅಳವಂಡಿ, ನಗರಸಭೆ ಸದಸ್ಯರಾದ ಬಸಯ್ಯಸ್ವಾಮಿ ಹಿರೇಮಠ ಮತ್ತು ಅಕ್ಬರ್ ಪಾಶಾ ಪಲ್ಟನ್, ಜಿಲ್ಲಾ ರಾಜೀವಗಾಂಧಿ ಪಂಚಾಯತ್‍ರಾಜ್ ಸೆಲ್ ಅಧ್ಯಕ್ಷ ಸುರೇಶ ದಾಸರಡ್ಡಿ, ಜಿಲ್ಲಾ ಡಿಸಿಸಿ ಕಾರ್ಯದರ್ಶಿ ಪದ್ಮಾ ಕಂಬಳಿ, ಜಾಫರ್ ಸಂಗಟಿ, ಬೀಮಣ್ಣ ಹಿರೇಮನಿ, ಜಿಲಾನ್ ತಟಗಾರ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande