ನವದೆಹಲಿ, 07 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಾಗತಿಕ ದಕ್ಷಿಣದ ರಾಷ್ಟ್ರಗಳು ಭಾರತವನ್ನು ಮಾದರಿಯಾಗಿ ನೋಡುತ್ತಿವೆ, ಇದು ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ಭಾರತದ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು.
ನವದೆಹಲಿಯಲ್ಲಿ ನಡೆದ ಟ್ರಸ್ಟ್ ಅಂಡ್ ಸೇಫ್ಟಿ ಇಂಡಿಯಾ ಫೆಸ್ಟಿವಲ್ 2025 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ದಶಕದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತದ ಸಾಧನೆಗಳು ಇಡೀ ಜಗತ್ತಿಗೆ ಮಾದರಿಯಾಗಿವೆ ಎಂದು ಹೇಳಿದರು.
ಭಾರತವು ಜವಾಬ್ದಾರಿಯುತ ಎಐ ಆಡಳಿತಕ್ಕಾಗಿ ನಂಬಿಕೆ, ಸುರಕ್ಷತೆ ಮತ್ತು ಸ್ಪಷ್ಟ ಮಾರ್ಗಸೂಚಿಗಳಿಗೆ ಒತ್ತು ನೀಡುತ್ತಿದೆ. ವಿವಿಧ ಸಮಾಜಗಳಲ್ಲಿ ಎಐ ನ ಪ್ರಯೋಜನ ಮತ್ತು ಅಪಾಯಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ, ಆದರೆ ಎಲ್ಲರಿಗೂ ಸಮಾನ ಅವಕಾಶ ಸಿಗುವಂತೆ ಚೌಕಟ್ಟು ರೂಪಿಸುವುದು ಮುಖ್ಯ ಎಂದು ಅವರು ಹೇಳಿದರು.
ಭಾರತವು ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಎಐ ಅನ್ನು ಸುಸ್ಥಿರ ಅಭಿವೃದ್ಧಿಯ ಸಾಧನವಾಗಿ ಬಳಸಲು ಒತ್ತಾಯಿಸಿದೆ. ಅಲ್ಲದೆ, ಜಾಗತಿಕ ಎಐ ಪಾಲುದಾರಿಕೆಯ ಸ್ಥಾಪಕ ಸದಸ್ಯನಾಗಿರುವ ಭಾರತ, ನವದೆಹಲಿ ಘೋಷಣೆಯ ಮೂಲಕ ಸಮಗ್ರ ಮತ್ತು ಹೊಣೆಗಾರಿಕೆಯ ಎಐ ದೃಷ್ಟಿಕೋನವನ್ನು ಮಂಡಿಸಿದೆ ಎಂದು ಡಾ. ಜೈಶಂಕರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa