ವಿಜಯಪುರ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸಚಿವ ಸ್ಥಾನದ ಆಸೆಯನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೊರ ಹಾಕಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 2023 ರ ಚುನಾವಣೆ ಪೂರ್ವದಲ್ಲೇ ಸಮ ಅಧಿಕಾರ ನೀಡುವ ಭರವಸೆ ನಮ್ಮ ಹೈಕಮಾಂಡ್ ನೀಡಿತ್ತು. ನಮ್ಮ ಮೂವರನ್ನು ಕರೆದು ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬನ್ನಿ
ಸಮ ಅಧಿಕಾರ ಹಂಚಿಕೆ ಮಾಡಲಾಗುತ್ತದೆ ಎಂದು ವರಿಷ್ಟರು ಭರವಸೆ ನೀಡಿದ್ದರು. 2023 ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮೂವರು ಜನರಿಗೂ ಅಧಿಕಾರ ಹಂಚಿಕೆ ಮಾಡುತ್ತೇವೆಂದಿದ್ದರು. ಎಂ. ಬಿ. ಪಾಟೀಲ್, ಶಿವಾನಂದ ಪಾಟೀಲ್, ನನಗೆ ಅಧಿಕಾರ ಹಂಚಿಕೆ ಮಾಡುವ ಭರವಸೆಯನ್ನು ಚುನಾವಣಾ ಪೂರ್ವ ಸಭೆ ಕರೆದು ರಾಜ್ಯ, ಕೇಂದ್ರದ ನಾಯಕರು ಮಾತನಾಡಿದ್ದರು. ನನಗೆ ಮಾತುಕೊಟ್ಟವರು ಈಗಾ ಮಾತನ್ನು ಉಳಿಸಿಕೊಳ್ಳಬೇಕು. ನಾನು ಮಾತುಕೊಟ್ಟಂಗೆ ನಡೆಯುತ್ತೇನೆ, ಈ ಮೂಲಕ ಸಚಿವ ಸ್ಥಾನ ನೀಡಬೇಕೆಂದು ಪರೋಕ್ಷವಾಗಿಯೇ ಶಾಸಕ ಯಶವಂತರಾಯಗೌಡ ಪಾಟೀಲ್ ಬೇಡಿಕೆ ಇಟ್ಟರು.
ನೆವಂಬರ್, ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದೆ. ಈ ವಿಚಾರ ಮಾತನಾಡಲು ರಾಂಗ್ ಪರ್ಸನ್, ರೈಟ್ ಪರ್ಸನ್ ಬಳಿ ಕೇಳಿ. ಅಧಿಕಾರ ಹಂಚಿಕೆ ವಿಚಾರ ನಾಲ್ಕು ಜನರಿಗೆ ಮಾತ್ರ ಗೊತ್ತು. ನಮಗೆ ಯಾವುದೇ ವಿಷಯ ಗೊತ್ತಿಲ್ಲ. ಈ ವಿಚಾರ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ,
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮಾತ್ರ ಗೊತ್ತು ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande