ಪರಿಶ್ರಮ ಪಿಯು ಕಾಲೇಜು ಶುಲ್ಕ ಮರು ಪಾವತಿಸುವಂತೆ ಆಯೋಗ ಆದೇಶ
ಬಳ್ಳಾರಿ, 03 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಾಕಿ ಪ್ರವೇಶ ಶುಲ್ಕ ಮರು ಪಾವತಿಸುವಂತೆ ಬೆಂಗಳೂರಿನ ಪರಿಶ್ರಮ ಪಿಯು ಕಾಲೇಜು ಹಾಗೂ ಎಜ್ಯುಕೇಷನ್ ಚಾರಿಟಬಲ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯದರ್ಶಿ ಬಸವರಾಜು ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ. ದೂರ
ಪರಿಶ್ರಮ ಪಿಯು ಕಾಲೇಜು ಶುಲ್ಕ ಮರು ಪಾವತಿಸುವಂತೆ ಆಯೋಗ ಆದೇಶ


ಬಳ್ಳಾರಿ, 03 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಾಕಿ ಪ್ರವೇಶ ಶುಲ್ಕ ಮರು ಪಾವತಿಸುವಂತೆ ಬೆಂಗಳೂರಿನ ಪರಿಶ್ರಮ ಪಿಯು ಕಾಲೇಜು ಹಾಗೂ ಎಜ್ಯುಕೇಷನ್ ಚಾರಿಟಬಲ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯದರ್ಶಿ ಬಸವರಾಜು ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

ದೂರುದಾರ ಡಾ.ರಾಜೇಶ್ ಬಿ.ಆರ್. ಕೊಟ್ಟೂರ್ ಅವರು ತಮ್ಮ ಮಗಳನ್ನು 2024-25ನೇ ಸಾಲಿಗೆ ಪರಿಶ್ರಮ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿಗೆ ಮೂಲ ದಾಖಲೆಗಳ ಸಹಿತ ರೂ.1,50,000 ಪಾವತಿಸಿದ್ದರು. ಕಾಲೇಜಿನ ವಾತಾವರಣದಿಂದಾಗಿ ಹಾಗೂ ಮಾನಸಿಕವಾಗಿ ಹೊಂದಾಣಿಕೆಯಾಗದ ಕಾರಣ ಪ್ರವೇಶ ರದ್ದುಪಡಿಸಿ ಕಾಲೇಜನ್ನು ತೊರೆದು ಪ್ರವೇಶ ಶುಲ್ಕ ಪಾವತಿಸುವಂತೆ ಕೋರಿದ್ದರು.

ಕಾಲೇಜು ಮಂಡಳಿ ವಿದ್ಯಾರ್ಥಿಯ ಮೂಲ ದಾಖಲೆ ಮತ್ತು ಆನ್‌ಲೈನ್ ಮೂಲಕ ರೂ.50,000 ಮರು ಪಾವತಿಸಿತ್ತು. ಬಾಕಿ ಮೊತ್ತ ರೂ.1,00,000 ಗಳನ್ನು ಕೆಲದಿನಗಳಲ್ಲಿ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದು, ಹಿಂದಿರುಗಿಸದೇ ಸೇವಾನ್ಯೂನ್ಯತೆ ಎಸಗಿದ್ದರು. ದೂರುದಾರರು ರೂ.1,00,000 ಗೆ ಶೇ.18ರ ಬಡ್ಡಿ ರೂ.25,000 ಹಾಗೂ ಬಾಕಿ ಮೊತ್ತ ಪರಿಹಾರ ಒದಗಿಸಿಕೊಡಬೇಕು ಎಂದು ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಆಯೋಗದಿಂದ ಎದುರುದಾರರಿಗೆ ನೋಟಿಸ್ ಜಾರಿಯಾದರೂ ಸಹ ಪ್ರಕರಣದಲ್ಲಿ ಎದುರುದಾರರು ಹಾಜರಾಗದ ಕಾರಣ ಪ್ರಕರಣವನ್ನು ಏಕಪಕ್ಷೀಯವಾಗಿ ಪರಿಗಣಿಸಿದೆ.

ಈ ವೇಳೆ ಆಯೋಗದ ಅಧ್ಯಕ್ಷರಾದ ಎನ್.ತಿಪ್ಪೇಸ್ವಾಮಿ ಹಾಗೂ ಸದಸ್ಯರಾದ ಮಾರ್ಲಾ ಶಶಿಕಲಾ ಅವರು ದಾಖಲಾತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಎದುರುದಾರರು ಪ್ರಕರಣದಲ್ಲಿ ಭಾಗಶ: ಪ್ರವೇಶಾತಿ ಮೊತ್ತವನ್ನು ಪಾವತಿಸಿರುವ ಬಗ್ಗೆ ದಾಖಲಾತಿ ಪರಿಶೀಲಿಸಿದ್ದು, ಉಳಿದ ಬಾಕಿ ಮೊತ್ತ ರೂ.1,00,000 ಗಳನ್ನು ಪಾವತಿಸದೇ ಇರುವುದು ಮೇಲ್ನೋಟಕ್ಕೆ ಸೇವಾ ನಿರ್ಲಕ್ಷö್ಯತನ ಎಸಗಿರುವುದು ಕಂಡು ಬಂದಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು.

ಈ ಆದೇಶದ ದಿನಾಂಕದಿ0ದ 45 ದಿನಗಳೊಳಗೆ ರೂ.1,00,000 ಮತ್ತು ಸೇವಾ ನ್ಯೂನ್ಯತೆಗೆ ರೂ.10,000 ಪರಿಹಾರ ಹಾಗೂ ದೂರಿನ ವೆಚ್ಚ ರೂ.5,000 ಗಳನ್ನು ಪಾವತಿಸುವಂತೆ ಆದೇಶಿಸಿದೆ. ತಪ್ಪಿದಲ್ಲಿ ರೂ.1,00,000 ಗಳಿಗೆ ಶೇ.6 ರಷ್ಟು ಬಡ್ಡಿ ಪಾವತಿಸಲು ಎದುರುದಾರರು ಭಾದ್ಯಸ್ಥರಿರುತ್ತಾರೆ ಎಂದು ಆಯೋಗವು ಆದೇಶಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande