ನವದೆಹಲಿ, 20 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೀಪಾವಳಿ ಮತ್ತು ಛತ್ ಹಬ್ಬದ ಪ್ರಯಾಣದ ದಟ್ಟಣೆ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ರೈಲ್ವೆ ಮಂಡಳಿಯ ವಾರ್ ರೂಂಗೆ ಭೇಟಿ ನೀಡಿ ಪ್ರಯಾಣಿಕರ ಚಲನವಲನವನ್ನು ಪರಿಶೀಲಿಸಿದರು.
ಸಚಿವರು 24 ಗಂಟೆಗಳ ಸೇವೆ ನೀಡುತ್ತಿರುವ ಸಿಬ್ಬಂದಿಯನ್ನು ಶ್ಲಾಘಿಸಿ, ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಈ ಬಾರಿ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ರೈಲ್ವೆ 12,011 ವಿಶೇಷ ರೈಲುಗಳನ್ನು ಸಂಚರಿಸುತ್ತಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 7,724 ರೈಲುಗಳು ಸಂಚರಿಸಿದ್ದವು.
ಅಕ್ಟೋಬರ್ 1 ರಿಂದ 19ರ ವರೆಗೆ ಈಗಾಗಲೇ 3,960 ವಿಶೇಷ ರೈಲುಗಳು ಸಂಚರಿಸಲ್ಪಟ್ಟಿವೆ. ಮುಂದಿನ ದಿನಗಳಲ್ಲಿ ಇನ್ನೂ 8,000 ರೈಲುಗಳನ್ನು ಓಡಿಸುವ ಯೋಜನೆ ಇದೆ. ಮಧ್ಯ ರೈಲ್ವೆ (1,998), ಉತ್ತರ ರೈಲ್ವೆ (1,919) ಮತ್ತು ಪಶ್ಚಿಮ ರೈಲ್ವೆ (1,501) ಅತಿ ಹೆಚ್ಚು ರೈಲುಗಳನ್ನು ನಿರ್ವಹಿಸುತ್ತಿವೆ.
ನವದೆಹಲಿ ಮತ್ತು ಆನಂದ್ ವಿಹಾರ್ ನಿಲ್ದಾಣಗಳಿಗೆ ಸಚಿವರು ಭೇಟಿ ನೀಡಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿದರು. ಪ್ರಯಾಣಿಕರ ಸುಗಮತೆಗೆ ಹೆಚ್ಚುವರಿ ಟಿಕೆಟ್ ಕೌಂಟರ್‌ಗಳು, ಕುಡಿಯುವ ನೀರಿನ ವ್ಯವಸ್ಥೆ, ಹೋಲ್ಡಿಂಗ್ ಪ್ರದೇಶಗಳು ಹಾಗೂ ವೇಳಾಪಟ್ಟಿ ಪ್ರದರ್ಶನಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa