ರಾಯಚೂರು, 19 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಉದ್ಯಮಶಿಲತಾಭಿವೃದ್ಧಿ ಕೇಂದ್ರ (ಸಿಡಾಕ್), ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತರಿರುವ ರಾಯಚೂರು ಜಿಲ್ಲೆಯ ಪರಿಶಿಷ್ಟ ಜಾತಿಯ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ರಾಯಚೂರನಲ್ಲಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು 2025ರ ಹಮ್ಮಿಕೊಳ್ಳಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ನಾಯಕತ್ವದ ಗುಣಲಕ್ಷಣಗಳು, ಉದ್ಯಮವನ್ನು ಆಯ್ಕೆ ಮಾಡುವ ವಿಧಾನ, ವ್ಯಾಪಾರೋದ್ಯಮಗಳ ಅವಕಾಶಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವದು ಹಾಗೂ ಈಗಾಗಲೇ ಸಿಡಾಕ್ ಮುಖಾಂತರ ತರಬೇತಿ ಪಡೆದು ಉದ್ಯಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಉದ್ಯಮಶೀಲರ ಅನುಭವ ಹಂಚಿಕೆ ಮತ್ತು ಸಂಬ0ಧಪಟ್ಟ ಇತ್ಯಾದಿ ವಿಷಯಗಳ ಬಗ್ಗೆ ಅನುಭವಿ ಅತಿಥಿ ಬೋಧಕರಿಂದ ಉಪನ್ಯಾಸ / ಮಾಹಿತಿ ನೀಡಲಾಗುವದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿರುವ 20 ರಿಂದ 45 ವರ್ಷದೊಳಗಿನ, ಕನಿಷ್ಠ ಎಸ್ಸೆಸ್ಸೆಲ್ಸಿ ಪಾಸ್/ಫೇಲ್ ಆದ ಪರಿಶಿಷ್ಟ ಜಾತಿಯ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಜಂಟಿ ನಿರ್ದೇಶಕರು, ಸಿಡಾಕ್, ಕಟ್ಟಡಸಂಖ್ಯೆ : 1-4-156(ಹಳೆಯ) 1-4-805(ಹೊಸ), ನಂದೀಶ್ವರ ಗುಡಿ ಹತ್ತಿರ, ನವೀನ್ ಹಾಸ್ಪಿಟಲ್ ಪಕ್ಕದಲ್ಲಿ, ಐ ಬಿರಸ್ತೆ, ರಾಯಚೂರು -584103 ಮೋಬೈಲ್ ಸಂಖ್ಯೆ 9986600631 ಇಲ್ಲಿಗೆ ಕರೆ ಮಾಡಿ ಅಕ್ಟೋಬರ್ 25 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ್ಳಬಹುದಾಗಿದೆ ಎಂದು ಸಿಡಾಕ್‌ನ ಜಂಟಿ ನಿರ್ದೇಶಕ ಜಿ. ಯು. ಹುಡೇದ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್