ವಿಜಯಪುರ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರಸ್ತುತ ರಾಜ್ಯದಲ್ಲಿ ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎನ್ನುವ ಚರ್ಚೆಗಳು ಆರಂಭವಾಗುತ್ತಿದ್ದಂತೆ ಇತ್ತ ಬಾಗಲಕೋಟೆ ಜಿಲ್ಲೆಯ ಇಲಕಲ್‌ನ ಸೃಜನಶೀಲ ನೇಕಾರ ಕಲಾವಿದನೊಬ್ಬ ಇಲಕಲ್ಲ ಸೀರೆಯಲ್ಲಿ ಆರ್ ಎಸ್ ಎಸ್ -100ರ ಎಂದು ಆರ್ ಎಸ್ ಎಸ್ ಮೇಲಿನ ಪ್ರೀತಿಯನ್ನು ತೋರರ್ಪಡಿಸಿದ್ದಾನೆ. ನೇಕಾರ ಕಲಾವಿದ ಮೇಘರಾಜ ಎಂಬುವರು ರೇಷ್ಮಿ ಧಾರಗಳನ್ನು ಬಳಸಿ ಆರ್ ಎಸ್ ಎಸ್ -100ರ ಸಂಭ್ರಮ ಎಂದು ಇಲಕಲ್ಲ ಸೀರೆಯ ಸೇರೆಗಿನಲ್ಲಿ ನೇಯ್ದಿದ್ದಾರೆ.ಇವರು ಈ ಹಿಂದೆ ಇಳಕಲ್ಲ ಸೀರೆಯಲ್ಲಿ ರಾಮ ಮಂದಿರ , ತ್ರಿವರ್ಣ ಧ್ವಜ ಉಳ್ಳ ಸೀರೆ ನೇಯ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande