ಲೋಕಾಯುಕ್ತ ದಾಳಿ, ಅಭಿಯಂತರ ಮಲಜಿ ಮನೆಯಲ್ಲಿ ಅಕ್ರಮ ಆಸ್ತಿ ಪತ್ತೆ
ವಿಜಯಪುರ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಆಲಮಟ್ಟಿ ಬಲದಂಡೆ ಕಾಲುವೆ ಉಪವಿಭಾಗ ಸಂಖ್ಯೆ-2 ಕಮತಗಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯ ಕಿರಿಯ ಅಭಿಯಂತರ ಚೇತನ ರಾಜಣ್ಣ ಮಲಜಿ ಅವರ ಬಾಗಲಕೋಟೆ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 272 ಗ್ರಾಂ ಬಂಗಾರ, 834 ಕೆಜಿ ಬೆಳ್ಳಿ ಆಭರಣಗಳು
ಲೋಕಾಯುಕ್ತ


ವಿಜಯಪುರ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಆಲಮಟ್ಟಿ ಬಲದಂಡೆ ಕಾಲುವೆ ಉಪವಿಭಾಗ ಸಂಖ್ಯೆ-2 ಕಮತಗಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯ ಕಿರಿಯ ಅಭಿಯಂತರ ಚೇತನ ರಾಜಣ್ಣ ಮಲಜಿ ಅವರ ಬಾಗಲಕೋಟೆ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 272 ಗ್ರಾಂ ಬಂಗಾರ, 834 ಕೆಜಿ ಬೆಳ್ಳಿ ಆಭರಣಗಳು ಸೇರಿದಂತೆ 24.81 ಲಕ್ಷ ರೂ. ಮೌಲ್ಯದ ಆಸ್ತಿ ವಶಪಡಿಸಿಕೊಂಡಿದ್ದಾರೆ.

ಮಲಜಿ ಅವರ ಬಾಗಲಕೋಟೆಯ ನವನಗರದ ಮನೆಯ ಮೇಲೆ ಕಮತಗಿಯ ಕಚೇರಿಯಲ್ಲಿ ಶೋಧ ನಡೆಸಿದ ಲೋಕಾಯುಕ್ತರು ನಾನಾ ದಾಖಲೆ ವಶಪಡಿಸಿಕೊಂಡಿದ್ದಾರೆ.

3 ಕಾರಗಳು, 3 ಮೊಟರ್ ಸೈಕಲ್‌ಗಳು ಮತ್ತು 4 ಖಾಲಿ ನಿವೇಶನಗಳು, ಹಾಗೂ ಬಾಗಲಕೋಟೆ-ನವನಗರದಲ್ಲಿ ಎರಡು ಮಹಡಿ ಇದ್ದ ಒಂದು ಮನೆ ಮತ್ತು ವಿಜಯಪುರದಲ್ಲಿ ಒಂದು ಮನೆ ಇದ್ದು, ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳು ದೊರೆತಿದ್ದು, ಅಂದಾಜು 1,01,28,774 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ ಎಂದು ಬಾಗಲಕೋಟೆಯ ಲೋಕಾಯುಕ್ತ ಅಧೀಕ್ಷಕ ಮಲ್ಲೇಶ ಟಿ. ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande