ಹುಬ್ಬಳ್ಳಿ, 08 ಜನವರಿ (ಹಿ.ಸ.) :
ಆ್ಯಂಕರ್ : ಜನವರಿ 17 ರಿಂದ ಏಪ್ರಿಲ್ 16, 2025 ರವರೆಗೆ 90 ದಿನಗಳ ಕಾಲ, ಕ್ಯಾಸಲ್ ರಾಕ್-ಕುಲೆಮ್ ಭಾಗದಲ್ಲಿ ಹಳಿ ನಿರ್ವಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವ ಹಿನ್ನಲೆ, ಕೆಲ ರೈಲುಗಳು ಭಾಗಶಃ ರದ್ದು ಮತ್ತು ಬೇರೆ ಮಾರ್ಗದ ಮೂಲಕ ಚಲಿಸಲಿವೆ.
ಅವುಗಳ ವಿವರ ಈ ಕೆಳಗಿನಂತಿವೆ..
*ರೈಲುಗಳ ಸಂಚಾರ ಭಾಗಶಃ ರದ್ದು:*
1. ಜನವರಿ 16 ರಿಂದ ಏಪ್ರಿಲ್ 15, 2025 ರವರೆಗೆ ಶಾಲಿಮಾರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18047 ಶಾಲಿಮಾರ್-ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣದವರೆಗೂ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವಿನ ಸಂಚಾರ ಭಾಗಶಃ ರದ್ದಾಗಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.
2. ರೈಲು ಸಂಖ್ಯೆ 18048 ವಾಸ್ಕೋ ಡ ಗಾಮಾ-ಶಾಲಿಮಾರ್ ಎಕ್ಸ್ ಪ್ರೆಸ್ ರೈಲು ಜನವರಿ 19 ರಿಂದ ಏಪ್ರಿಲ್ 18, 2025 ರವರೆಗೆ ವಾಸ್ಕೋ ಡ ಗಾಮಾ ನಿಲ್ದಾಣದ ಬದಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಂಡಿದೆ.
3. ಜನವರಿ 16, 23, 30; ಫೆಬ್ರವರಿ 6, 13, 20, 27; ಮಾರ್ಚ್ 6, 13, 20, 27; ಮತ್ತು ಏಪ್ರಿಲ್ 3, 10, 2025 ರಂದು ಹೊರಡುವ ರೈಲು ಸಂಖ್ಯೆ 17419/17021 ತಿರುಪತಿ / ಹೈದರಾಬಾದ್-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳುತ್ತದೆ.
4. ರೈಲು ಸಂಖ್ಯೆ 17420/17022 ವಾಸ್ಕೋ ಡ ಗಾಮಾ-ತಿರುಪತಿ/ಹೈದರಾಬಾದ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಜನವರಿ 17, 24, 31; ಫೆಬ್ರವರಿ 7, 14, 21, 28; ಮಾರ್ಚ್ 7, 14, 21, 28; ಮತ್ತು ಏಪ್ರಿಲ್ 4, 11, 2025 ರಂದು ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
5. ಜನವರಿ 17 ರಿಂದ ಏಪ್ರಿಲ್ 16, 2025 ರವರೆಗೆ ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17039 ಸಿಕಂದರಾಬಾದ್-ವಾಸ್ಕೋ ಡ ಗಾಮಾ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.
6. ರೈಲು ಸಂಖ್ಯೆ 17040 ವಾಸ್ಕೋ ಡ ಗಾಮಾ-ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಜನವರಿ 18 ರಿಂದ ಏಪ್ರಿಲ್ 17, 2025 ರವರೆಗೆ ವಾಸ್ಕೋಡಗಾಮಾ ನಿಲ್ದಾಣದ ಬದಲಿಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುತ್ತದೆ, ವಾಸ್ಕೋಡಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.
*ರೈಲುಗಳ ಮಾರ್ಗ ಬದಲಾವಣೆ:*
1. ಜನವರಿ 18 ರಿಂದ ಏಪ್ರಿಲ್ 12, 2025 ರವರೆ ಪುಣೆಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11097 ಪುಣೆ-ಎರ್ನಾಕುಲಂ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಪುಣೆ, ಪನ್ವೇಲ್, ರೋಹಾ ಮತ್ತು ಮಡಗಾಂವ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸತಾರಾದಿಂದ ಸ್ಯಾನ್ವೊರ್ಡೆಮ್ ನಿಲ್ದಾಣಗಳವರೆಗೆ ತಪ್ಪಿರುತ್ತದೆ.
2. ಜನವರಿ 20 ರಿಂದ ಏಪ್ರಿಲ್ 14, 2025 ರವರೆಗೆ ಎರ್ನಾಕುಲಂ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 11098 ಎರ್ನಾಕುಲಂ-ಪುಣೆ ಪೂರ್ಣ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಡ್ಗಾಂವ್, ರೋಹಾ, ಪನ್ವೇಲ್ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸ್ಯಾನ್ವೊರ್ಡೆಮ್ ನಿಲ್ದಾಣದಿಂದ ಸತಾರಾ ನಿಲ್ದಾಣಗಳವರೆಗೆ ಇರುವುದಿಲ್ಲ.
3. ಜನವರಿ 20 ರಿಂದ ಏಪ್ರಿಲ್ 14, 2025 ರವರೆಗೆ ವಾಸ್ಕೋ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17315 ವಾಸ್ಕೋ ಡ ಗಾಮಾ-ವೆಲಂಕಣಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಡಗಾಂವ್, ಮಂಗಳೂರು ಜಂಕ್ಷನ್, ಶೋರನೂರ್ ಮತ್ತು ಈರೋಡ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸ್ಯಾನ್ವೊರ್ಡೆಮ್ ನಿಲ್ದಾಣದಿಂದ ಸೇಲಂ ನಿಲ್ದಾಣಗಳವರೆಗೆ ಇರುವುದಿಲ್ಲ.
4. ಜನವರಿ 21 ರಿಂದ ಏಪ್ರಿಲ್ 15 ರವರೆಗೆ ವೆಲಂಕಣಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17316 ವೆಲಂಕಣಿ-ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಈರೋಡ್, ಶೋರನೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ಸೇಲಂನಿಂದ ಸ್ಯಾನ್ವೊರ್ಡೆಮ್ ನಿಲ್ದಾಣಗಳವರೆಗೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa