ನಯ್ಪಿಡಾ,4 ಜನವರಿ (ಹಿ.ಸ.) :
ಆ್ಯಂಕರ್ :
ಮ್ಯಾನ್ಮಾರ್‌ನ ಸೇನಾ ಸರ್ಕಾರವು ತನ್ನ ರಾಷ್ಟ್ರದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕ್ಷಮಾದಾನದ ಅಡಿಯಲ್ಲಿ 180 ವಿದೇಶಿಯರು ಸೇರಿದಂತೆ ಸುಮಾರು 6,000 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.
ಇದು ಸಾಮೂಹಿಕ ಕ್ಷಮಾದಾನದ ಭಾಗವಾಗಿ ಇತರ ಕೈದಿಗಳ ಶಿಕ್ಷೆಯನ್ನು ಕಡಿಮೆಗೊಳಿಸಿತು. ಯಾವ ಕೈದಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ ಅಥವಾ ಬಿಡುಗಡೆಯಾದ ನಂತರ ಗಡಿಪಾರು ಮಾಡಲಿರುವ ವಿದೇಶಿ ಬಂಧಿತರ ರಾಷ್ಟ್ರೀಯತೆಗಳ ಬಗ್ಗೆ ಸೇನಾ ಸರಕಾರ ವಿವರಗಳನ್ನು ನೀಡಲಿಲ್ಲ. ಮಾನವೀಯ ಮತ್ತು ಸಹಾನುಭೂತಿಯ ಆಧಾರದ ಮೇಲೆ ಕ್ಷಮಾದಾನಕ್ಕೆ ಆದೇಶ ನೀಡಿರುವುದಾಗಿ ಸೇನಾಸರಕಾರ ಪತ್ರಿಕಾಪ್ರಕಟಣೆಯಮೂಲಕಹೇಳಿದೆ.
ಜುಂಟಾದಿಂದ ಇನ್ನೂ ಕಾರಾಗೃಹದಲ್ಲಿರುವವರಲ್ಲಿ ದೇಶದ ಮಾಜಿ ನಾಯಕಿ, ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ಕೂಡ ಸೇರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ