ಅವಲಕ್ಕಿ ಸೇವೆಯಿಂದ ಹಲವು ಆರೋಗ್ಯ ಪ್ರಯೋಜನಗಳು 
ನವದೆಹಲಿ,14 ಜನವರಿ (ಹಿ.ಸ.) : ಆ್ಯಂಕರ್ : ಕೃಷ್ಣ, ಸುಧಾಮರ ಸ್ನೇಹದ ಪ್ರತೀಕವಾದ ಅವಲಕ್ಕಿ ಭಾರತದಾದ್ಯಂತ ಜನಪ್ರಿಯವಾಗಿದೆ. ಅನೇಕರು ಅವಲಕ್ಕಿಯಿಂದ ನಾನಾ ರೀತಿಯ ಖಾದ್ಯಗಳನ್ನು ಮಾಡಿ ತಿನ್ನುತ್ತಾರೆ. ಎಲ್ಲರೂ ಇಷ್ಟಪಡುವ ಆಹಾರಗಳಲ್ಲಿ ಅವಲಕ್ಕಿ ಕೂಡ ಒಂದು. ಅಕ್ಕಿ ಕಾಳುಗಳನ್ನು ನೆನೆಸಿ ಅರೆ ಬೇಯಿಸಿ
ಅವಲಕ್ಕಿ ಸೇವೆಯಿಂದ ಹಲವು ಆರೋಗ್ಯ ಪ್ರಯೋಜನಗಳು


ನವದೆಹಲಿ,14 ಜನವರಿ (ಹಿ.ಸ.) :

ಆ್ಯಂಕರ್ : ಕೃಷ್ಣ, ಸುಧಾಮರ ಸ್ನೇಹದ ಪ್ರತೀಕವಾದ ಅವಲಕ್ಕಿ ಭಾರತದಾದ್ಯಂತ ಜನಪ್ರಿಯವಾಗಿದೆ. ಅನೇಕರು ಅವಲಕ್ಕಿಯಿಂದ ನಾನಾ ರೀತಿಯ ಖಾದ್ಯಗಳನ್ನು ಮಾಡಿ ತಿನ್ನುತ್ತಾರೆ. ಎಲ್ಲರೂ ಇಷ್ಟಪಡುವ ಆಹಾರಗಳಲ್ಲಿ ಅವಲಕ್ಕಿ ಕೂಡ ಒಂದು.

ಅಕ್ಕಿ ಕಾಳುಗಳನ್ನು ನೆನೆಸಿ ಅರೆ ಬೇಯಿಸಿ ಕುಟ್ಟಿ ತಟ್ಟಿ ಚಪ್ಪಟೆ ಮಾಡುವ ಮೂಲಕ ಇವುಗಳನ್ನು ತಯಾರಿಸಲಾಗುತ್ತದೆ. ಈ ಅವಲಕ್ಕಿಯಿಂದ ನಾನಾ ರುಚಿಗಳೊಂದಿಗೆ ನಾನಾ ಪದಾರ್ಥಗಳನ್ನು ತಯಾರಿಸುತ್ತಾರೆ.

ಇದನ್ನು ಜನರು ಹೆಚ್ಚಾಗಿ ಪೋಹಾ ಎಂದು ಕರೆಯುತ್ತಾರೆ. ಅನೇಕ ಜನರು ಉಪಾಹಾರಕ್ಕಾಗಿ ಅವಲಕ್ಕಿ ಅನ್ನು ತಿನ್ನಲು ಇಷ್ಟಪಡುತ್ತಾರೆ. ಅವಲಕ್ಕಿ ರುಚಿಕರ ಮಾತ್ರವಲ್ಲ. ಇದು ದೇಹಕ್ಕೂ ಒಳ್ಳೆಯದು.

ಕಾರ್ಬೋಹೈಡ್ರೇಟ್‌ಗಳು ಕರುಳಿನಲ್ಲಿ ಜೀರ್ಣವಾಗುತ್ತವೆ ಮತ್ತು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಕರುಳಿನ ಆರೋಗ್ಯ ಹದಗೆಟ್ಟಾಗ ಹೊಟ್ಟೆಯ ಸಮಸ್ಯೆಗಳು ಉದ್ಭವಿಸುತ್ತವೆ. ಆಗ ನಿಮಗೆ ಅಜೀರ್ಣ ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಶುರುವಾಗುತ್ತವೆ. ಇದಕ್ಕೆ ಪರಿಹಾರವಾಗಿ ಅವಲಕ್ಕಿ ತಿಂದರೆ ಉತ್ತಮ ಪರಿಹಾರ ಪಡೆಯಬಹುದು.

ಅವಲಕ್ಕಿ ಗಳಲ್ಲಿ ಪೋಷಕಾಂಶಗಳು

ಅವಲಕ್ಕಿನಲ್ಲಿ - 18.8 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 130 ಕ್ಯಾಲೋರಿಗಳು, 2.4 ಗ್ರಾಂ ಪ್ರೋಟೀನ್, 1.14 ಗ್ರಾಂ ಕೊಬ್ಬು, 0.9 ಗ್ರಾಂ ಆಹಾರದ ನಾರು, 4.46 ಮಿಲಿಗ್ರಾಂ ಕಬ್ಬಿಣದ ಅಂಶ ಮತ್ತು 9.19 ಮಿಲಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ.

ಪ್ರಸ್ತುತ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಮಧುಮೇಹವು ಸಾಮಾನ್ಯ ಸಮಸ್ಯೆಯಾಗಿದೆ. ಮಧುಮೇಹದಿಂದ ಬಳಲುತ್ತಿರುವ ಜನರು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದಕ್ಕಾಗಿ ಅವಲಕ್ಕಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಏಕೆಂದರೆ ಅವಲಕ್ಕಿನಲ್ಲಿ ಸಾಕಷ್ಟು ನಾರಿನ ಅಂಶ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಹರಿವನ್ನು ನಿಯಂತ್ರಣ ಮಾಡುತ್ತದೆ.

ಅವಲಕ್ಕಿಯು ದೇಹದಲ್ಲಿ ರಕ್ತದ ಕೊರತೆಯ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತಿದೆ . ಅವಲಕ್ಕಿಯನ್ನು ತಿನ್ನುವುದರಿಂದ ಕಬ್ಬಿಣಾಂಶವನ್ನು ಪಡೆಯಬಹುದು . ಕಡಿಮೆ ರಕ್ತ ಹೊಂದಿರುವ ಜನರಲ್ಲಿ ರಕ್ತಹೀನತೆ ಉಂಟಾಗುತ್ತದೆ. ಅಂತಹವರು ಅವಲಕ್ಕಿ ತಿಂದರೆ ಲಾಭವಾಗುತ್ತದೆ. ಅವಲಕ್ಕಿ ಗರ್ಭಿಣಿಯರಿಗೂ ತುಂಬಾ ಒಳ್ಳೆಯದು. ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ, ಆದ್ದರಿಂದ ಅವಲಕ್ಕಿಯನ್ನು ತಿನ್ನುವುದರಿಂದ ಉತ್ತಮ. ಇದಲ್ಲದೆ, ಮುಟ್ಟಿನ ಸಮಯದಲ್ಲಿ ಅವಲಕ್ಕಿ ತಿನ್ನುವುದು ತುಂಬಾ ಒಳ್ಳೆಯದು.

ಇತ್ತೀಚಿನ ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳುವುದು ಗಂಭೀರ ಸಮಸ್ಯೆಯಾಗಿದೆ. ಸ್ಥೂಲಕಾಯತೆಯಿಂದಾಗಿ, ದೇಹವು ವಿವಿಧ ರೋಗಗಳಿಂದ ಬಳಲುತ್ತದೆ. ಅದಕ್ಕಾಗಿಯೇ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹೇಳಲಾಗುತ್ತದೆ. ಹೀಗಾಗಿ ಅವಲಕ್ಕಿ ಸೇವನೆ ಸಹ ತೂಕ ನಷ್ಟಕ್ಕೆ ತುಂಬಾ ಉಪಯುಕ್ತವಾಗಿದೆ. ವಯಸ್ಸಿಗೆ ಅನುಗುಣವಾಗಿ ತೂಕ ಇರಬೇಕು. ನೀವು ಅಧಿಕ ತೂಕ ಹೊಂದಿದ್ದರೆ ಮತ್ತು ತೂಕ ಇಳಿಸಿಕೊಳ್ಳಲು ವಿವಿಧ ಪರಿಹಾರಗಳನ್ನು ಪ್ರಯತ್ನಿಸುತ್ತಿದ್ದರೆ, ಈ ಸಮಯದಲ್ಲಿ ಅವಲಕ್ಕಿಯನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಬಹುದು. ಅವಲಕ್ಕಿಯಲ್ಲಿ ಕ್ಯಾಲೋರಿ ಕಡಿಮೆ. ಇದು ದೇಹದಲ್ಲಿ ಕೊಬ್ಬನ್ನು ಉಂಟು ಮಾಡುವುದಿಲ್ಲ.ಅವಲಕ್ಕಿಯ ತಿನ್ನಲು ಪರಿಪೂರ್ಣ ಆಹಾರವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande